ಭಾರತೀಯ ಚಿತ್ರರಂಗದ ಬಾಹುಬಲಿ, ದಕ್ಷಿಣದ ಖ್ಯಾತ ನಟ ಪ್ರಭಾಸ್ ಅಭಿನಯದ ಸಲಾರ್ ಚಿತ್ರವು ಸೆಪ್ಟೆಂಬರ್ 28 ರಂದು ತೆರೆಗಪ್ಪಳಿಸಲಿದೆ. ಕೆ.ಜಿ.ಎಫ್ ಖ್ಯಾತಿಯ ಪ್ರಖ್ಯಾತ ಬ್ಯಾನರ್ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ, ಕನ್ನಡ ನಿರ್ದೇಶಕ ಪ್ರಶಾಂತ್ ನೀಲ್ ಬತ್ತಳಿಕೆಯಿಂದ ಹೊರಟಿರುವ ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರಾಗಿರುವ ಪ್ರಭಾಸ್ ನಟನೆಯ ಸಲಾರ್ ಚಿತ್ರದ ಬಗ್ಗೆ ಈಗಾಗಲೇ ಕುತೂಹಲ ಮತ್ತು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಕೆ.ಜಿ.ಎಫ್ ಕಮಾಲಿಗೆ ಮನಸೋತು ಕ್ರೇಜ್ ಹುಟ್ಟಿಸಿಕೊಂಡ ಸಿನಿಪ್ರಿಯರು ಸಲಾರ್ ಗೂ ಸೋಲುವರೆ? ಸಿನಿಮಾ ಗೆಲ್ಲಿಸುವರೆ ಎನ್ನುವುದನ್ನು ಕಾಲವೆ ಹೇಳಲಿದೆ.
ಆಗಸ್ಟ್ 15 ರಂದು, ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಸಲಾರ್ನ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ ಮತ್ತು ಸೆಪ್ಟೆಂಬರ್ 28, 2023 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ. ಈ ಚಿತ್ರದಲ್ಲಿ ಪ್ರಭಾಸ್ ಬಂಡಾಯಗಾರ(ರೆಬೆಲ್)ನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಸಲಾರ್ ಚಿತ್ರದಲ್ಲಿ ಪ್ರಭಾಸ್ ಜೊತೆ ಶ್ರುತಿ ಹಾಸನ್ ನಾಯಕಿಯಾಗಿ ಮತ್ತು ಜಗಪತಿ ಬಾಬು ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.
ಸಲಾರ್ ಹೊರತಾಗಿ, ಪ್ರಭಾಸ್ ಅವರ ಬಳಿ ಆದಿಪುರುಷ ಮತ್ತು ಪ್ರಾಜೆಕ್ಟ್ ಕೆ ಇದೆ. ರಾಮಾಯಣವನ್ನು ಆಧರಿಸಿ, ಓಂ ರಾವುತ್ ನಿರ್ದೇಶನದ ಆದಿಪುರುಷ ಚಿತ್ರದಲ್ಲಿ ಪ್ರಭಾಸ್ ಮತ್ತು ಸೈಫ್ ಅಲಿ ಖಾನ್ ನಟಿಸಿದ್ದಾರೆ ಮತ್ತು ಅವರ ಪಾತ್ರಗಳು ಭಗವಾನ್ ರಾಮ ಮತ್ತು ರಾವಣನನ್ನು ಆಧರಿಸಿದೆ ಎನ್ನಲಾಗಿದೆ. ಆದಿಪುರುಷ್ ಮುಂದಿನ ವರ್ಷ ಜನವರಿ 12 ರಂದು ಬಿಡುಗಡೆಯಾಗಲಿದೆ.