ದಾಖಲೆ ಬೆಲೆಗೆ ಮಾರಾಟವಾಯ್ತು ಬಾಕ್ಸ್ ಆಫೀಸ್ ಬಾಹುಬಲಿ ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ವಿದೇಶೀ ಹಕ್ಕು!

ಭಾರತೀಯ ಚಿತ್ರರಂಗದ ಬಾಹುಬಲಿ ಎಂದೇ ಖ್ಯಾತನಾಮ ಪ್ರಭಾಸ್, ಬಾಕ್ಸ್ ಆಫೀಸ್ ಕೊಳ್ಳೆಹೊಡೆಯುವ ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಹಾಗೂ ಕೆ.ಜಿ.ಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೋಡಿಯ “ಸಲಾರ್” ಚಿತ್ರವು ಬಿಡುಗಡೆಗೂ ಮುನ್ನವೇ ಸದ್ದುಮಾಡುತ್ತಿರುವ ವರದಿಗಳಾಗಿವೆ.

ವರದಿಗಳನ್ನು ನಂಬುವುದಾದರೆ, ಸಲಾರ್‌ನ ವಿದೇಶಿ ಹಕ್ಕುಗಳು 90 ರಿಂದ100 ಕೋಟಿ ರೂ.ಗೆ ಮಾರಾಟವಾಗಿದೆ. ಈ ಅಂಕೆಯೊಂದಿಗೆ, ಪ್ರಭಾಸ್ ಅಭಿನಯದ ಸಲಾರ್ ಚಿತ್ರವು ಅತಿ ಹೆಚ್ಚು ವಿದೇಶಿ ಹಕ್ಕುಗಳ ಒಪ್ಪಂದ ಹೊಂದಿದ ತೆಲುಗು ಚಲನಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

https://twitter.com/box0fficeindia/status/1642119837295194112?ref_src=twsrc%5Etfw%7Ctwcamp%5Etweetembed%7Ctwterm%5E1642119837295194112%7Ctwgr%5E91090cc57ea5e82f0daabbf964368ca74396f145%7Ctwcon%5Es1_&ref_url=https%3A%2F%2Fwww.indiatvnews.com%2Fentertainment%2Fregional-cinema%2Fprabhas-starrer-salaar-scripts-history-with-highest-overseas-rights-heres-what-we-know-latest-entertainment-news-2023-04-01-859614

ಪ್ರಭಾಸ್ ಅವರ ಬಾಹುಬಲಿ 2: ದಿ ಕನ್‌ಕ್ಲೂಷನ್ ಈ ಹಿಂದೆ 70 ಕೋಟಿ ರೂಪಾಯಿಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ. ರಾಜಮೌಳಿ ಅವರ ಆರ್‌ಆರ್‌ಆರ್ 68 ಕೋಟಿ ರೂಪಾಯಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಪ್ರಭಾಸ್ ಅವರ ಸಾಹೋ 42 ಕೋಟಿ ರೂಪಾಯಿಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಹಾಗೂ ರಾಧೆ ಶ್ಯಾಮ್ 25 ಕೋಟಿ ಗಳಿಸಿ 4ನೇ ಸ್ಥಾನದಲ್ಲಿದ್ದಾರೆ.

ಪ್ರಭಾಸ್ ಬಾಕ್ಸ್ ಆಫೀಸ್ ನ ಬಾಹುಬಲಿ ಎನ್ನುವುದು ಆತನ ಸಿನಿಮಾಗಳು ಬಿಡುಗಡೆಗೂ ಮುನ್ನವೇ ಕೋಟಿ ಬಾಚುವ ರೀತಿಯಿಂದಲೇ ತಿಳಿಯಬಹುದು ಎಂದು ಅಭಿಮಾನಿಗಳು ಹರ್ಷಿಸುತ್ತಿದ್ದಾರೆ.

ಸಲಾರ್ ಚಿತ್ರವು ಆಕ್ಷನ್-ಥ್ರಿಲ್ಲರ್ ಆಗಿದ್ದು, ಇದರಲ್ಲಿ ಪ್ರಭಾಸ್ ಮುಖ್ಯ ಪಾತ್ರದಲ್ಲಿದ್ದಾರೆ. ಶ್ರುತಿ ಹಾಸನ್ ಜೊತೆ ನೀಡಲಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರ ಇದೇ ವರ್ಷ ಸೆಪ್ಟಂಬರ್ ನಲ್ಲಿ ಬಿಡುಗಡೆ ಹೊಂದಲಿದೆ ಎಂದು ಅಂದಾಜಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ, ಸಾಗರೋತ್ತರ ಮಾರುಕಟ್ಟೆಯು ಭಾರತೀಯ ಚಲನಚಿತ್ರಗಳಿಗೆ ಗಮನಾರ್ಹ ಆದಾಯದ ಮೂಲವಾಗಿದೆ. ಅಮೇರಿಕಾ, ಯುಕೆ, ಯುಎಇ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಭಾರತೀಯರು ಹರಡಿಕೊಂಡಿರುವುದರಿಂದ, ಹಲವಾರು ಚಲನಚಿತ್ರಗಳು ವಿದೇಶಗಳಲ್ಲಿ ಭಾರೀ ಪ್ರಮಾಣದ ಹಣವನ್ನು ಸಂಗ್ರಹಿಸುತ್ತಿವೆ.