ಬೆಂಗಳೂರು: ಎಂಜಿನಿಯರಿಂಗ್ ಮ್ಯಾನುಫಾಕ್ಚರರ್ ಸಣ್ಣ ಮತ್ತು ಮಧ್ಯಮ ಎಂಟರ್ಪ್ರೂನರ್ಸ್ ರಿಸೋರ್ಸ್ ಗೂಪ್ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು ಬೆಂಗಳೂರಿನ ಖಾಸಗಿ ಹೋಟಿನಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಾಧಕರಿಗೆ ಸನ್ಮಾನ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪವರ್ ತಂಡದ ಸದಸ್ಯೆ ಸುಗುಣಾ ಶಂಕರ್ ಮಹಿಳಾ ಉದ್ಯಮಿ ಸಾಧಕ ಪ್ರಶಸ್ತಿ ಪಡೆದುಕೊಂಡರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇ.ಎಂ.ಇ.ಆರ್.ಜಿ ಅಧ್ಯಕ್ಷೆ ಸುಮಿತಾ ನಾಯಕ್, ಸಿಂಬಯೋಸಿಸ್ ಕಾನೂನು ಶಾಲೆಯ ನಿರ್ದೇಶಕಿ ಶಶಿಕಲಾ ಗುರ್ಪುರ್, ಉಬುಂಟು ಅಧ್ಯಕ್ಷೆ ರತ್ನಪ್ರಭಾ ಉಪಸ್ಥಿತರಿದ್ದರು.
ಅತಿಥಿಗಳಿಗೆ ಕ್ರಾಫ಼್ಟ್ ಮಂತ್ರ ಬ್ಯಾಗ್ ಗಳನ್ನು ವಿತರಿಸಲಾಯಿತು.
ಮಾಲ್ಸೀ ಪ್ರದರ್ಶಕರಲ್ಲಿ ಒಬ್ಬರಾಗಿದ್ದರು.
ಪವರ್ ಸಂಸ್ಥೆ ಅಧ್ಯಕ್ಷೆ ಸುವರ್ಷ, ರೇಣು ಜಯರಾಂ, ಸುಗುಣ ಮತ್ತು ಮಹಾಲಸಾ ಭಾಗವಹಿಸಿದ್ದರು.