ಇಂದು ಬೆಳಿಗ್ಗೆಯಿಂದ 7 ತಾಸು ವಿದ್ಯುತ್‌ ಸಮಸ್ಯೆ, 68 ಕಡೆ ಕರೆಂಟ್‌ ಕಟ್;‌ ಸಂಜೆವರೆಗೂ ಕೂಡ ಪವರ್‌ ಪ್ರಾಬ್ಲಮ್

ಧಾರವಾಡ ನಗರದ ಹಲವು ಬಡಾವಣೆಗಳಲ್ಲಿ ನವೆಂಬರ್ 19ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ವಿದ್ಯುತ್ ವ್ಯತ್ಯಯ ಉಂಟಾಗುವ ಪ್ರದೇಶಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ಧಾರವಾಡ ನಗರದ ಹಲವು ಬಡಾವಣೆಗಳ ಜನರಿಗೆ ಇಂದು (ನವೆಂಬರ್ 19) ವಿದ್ಯುತ್ ವ್ಯತ್ಯಯದ ಬಿಸಿ ತಟ್ಟಲಿದೆ. ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ಪ್ರದೇಶಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ. ಹೀಗಾಗಿ, ಸುಮಾರು 7 ಗಂಟೆಗಳ ಕಾಲ ವಿದ್ಯುತ್ ಇರುವುದಿಲ್ಲ. ಸಾರ್ವಜನಿಕರು ಅಗತ್ಯ ಕೆಲಸಗಳನ್ನು ಮುಂಚಿತವಾಗಿಯೇ ಪೂರ್ಣಗೊಳಿಸಿಕೊಳ್ಳುವಂತೆ

ಇಲ್ಲೆಲ್ಲಾ ಕರೆಂಟ್‌ ಪ್ರಾಬ್ಲಮ್‌ ಪಕ್ಕಾ!

110 ಕೆ.ವಿ. ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ 11 ಕೆ.ವಿ. ಗಾಂಧಿ ಚೌಕ್ ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಶ್ಮಿ ನಗರ, ಕೋಳಿಕೇರಿ ಹೊಸ ಪ್ಲಾಟ್, ಲಿದಾಕರ್ ರಸ್ತೆ, ಸದಾನಿ ಎಸ್ಟೇಟ್ ಮತ್ತು ಐಪಿ ಸೆಟ್, ವಾಜಪೇಯಿ ಕಾಲೋನಿ, ಕಂಪ್ಲಿ ಬಸವೇಶ್ವರ ನಗರ, ಜಕಾತಿ ಪ್ಲಾಟ್, ಆತ್ಮಾನಂದ ನಗರ, ರೇಣುಕಾ ಕಾಲೋನಿ, ಕೋಳಿಕೇರಿ ದ್ಯಾಮವ್ವ ಗುಡಿ ಓಣಿ, ವಾಲ್ಮೀಕಿ ಓಣಿ, ಹೊಸ ಓಣಿ, ಮುಕ್ತಿಧಾಮ, ಪ್ರಶಾಂತ ಕಾಲೋನಿ, ನವಲೂರು ಅಗಸಿ, ಆರ್ಯರ ಓಣಿ, ಕಲ್ಲಿ ಓಣಿ, ಬಸ್ತಿ ಓಣಿ, ಉಡುಪಿ ಓಣಿ, ಕೋಳಿಕೇರಿ ಮುಖ್ಯ ರಸ್ತೆ ಮತ್ತು ನಂದಿ ಬಡಾವಣೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.