ಉಡುಪಿ: ಫ್ಲಾಟ್ಫಾರಂ ಆಫ್ ವುಮೆನ್ ಎಂಟರ್ಪ್ರೆನರ್ಸ್ (ಪವರ್) ಸಂಸ್ಥೆ ನೂತನ ಪದಗ್ರಹಣ ಸಮಾರಂಭವು ಮಣಿಪಾಲ ಹೋಟೆಲ್ ಸೆಂಟ್ರಲ್ ಪಾರ್ಕ್ ಸಭಾಂಗಣದಲ್ಲಿ ನಡೆಯಿತು.
ಸಿಡಿಪಿಒ ವೀಣಾ ವಿವೇಕಾನಂದ, ಉಬುಂಟು ಸಂಸ್ಥೆ ಜೊತೆ ಕಾರ್ಯದರ್ಶಿ ದೇವಕಿ ಯೋಗಾನಂದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪವರ್ ಸಂಸ್ಥೆ ಅಧ್ಯಕ್ಷೆ ಪುಷ್ಪಾ ಜಿ. ರಾವ್ ಅಧ್ಯಕ್ಷತೆ ವಹಿಸಿದ್ದರು.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಾಧಕಿಯರಾದ ಕಲ್ಪ ಟ್ರಸ್ಟ್ ಸ್ಥಾಪಕಿ ಪ್ರಮೀಳ ರಾವ್, ಅನಿಮಲ್ ಕ್ಯಾರ್ ಟ್ರಸ್ಟ್ ಗೌರವ ಟ್ರಸ್ಟಿ ಸುಮಾ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ನಿಯೋಜಿತ ಅಧ್ಯಕ್ಷೆ ತಾರಾ ತಿಮ್ಮಯ್ಯ, ಸುಗುಣಾ ಸುವರ್ಣ, ಸುವರ್ಷ ಮಿನ್ಜ್, ಪ್ರಿಯಾ ಕಾಮತ್ ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳು:
ಪವರ್ ಸಂಸ್ಥೆ ನೂತನ ಅಧ್ಯಕ್ಷೆಯಾಗಿ ತಾರಾ ತಿಮ್ಮಯ್ಯ, ಉಪಾಧ್ಯಕ್ಷೆಯಾಗಿ ಸುಗುಣಾ ಸುವರ್ಣ, ಸುವರ್ಷ ಮಿನ್ಜ್, ಕಾರ್ಯದರ್ಶಿಯಾಗಿ ಪ್ರಿಯಾ ಕಾಮತ್, ಕೋಶಾಧಿಕಾರಿಯಾಗಿ ಶಾಲಿನಿ ಬಂಗೇರ, ಜೊತೆ ಕಾರ್ಯದರ್ಶಿಯಾಗಿ ಪಲ್ಲವಿ ಬೆಹರ ಆಯ್ಕೆಯಾಗಿದ್ದಾರೆ.