ಜೂ. 20-22 ರ ವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಜೂನ್ 20 ರಿಂದ 22 ರ ವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

110 ಕೆ.ವಿ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ 110 ಕೆ.ವಿ ಕೇಮಾರ್ ಬೇ, ಪಿಟಿ ಬೇ, ಪರಿವರ್ತಕ- 1 ಬೇ, ಹಿರಿಯಡ್ಕ ಬೇ, ಪರಿವರ್ತಕ- 2 ಬೇ, ಪರಿವರ್ತಕ 1 ಎಂಡ್ 2 ಮತ್ತು ಎಲ್ಲಾ 11 ಕೆ.ವಿ ಉಪಕರಣಗಳ ತ್ರೈಮಾಸಿಕ ನಿರ್ವಹಣೆ ಕೆಲಸ ಹಮ್ಮಿಕೊಂಡಿರುವುದರಿಂದ ಸದರಿ 110 ಕೆ.ವಿ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಮಾರ್ಗಗಳಾದ ಕಾರ್ಕಳ ಟೌನ್, ಟಿ.ಎಮ್.ಸಿ., ಅಜೆಕಾರ್,
ಬೈಲೂರು ಎಕ್ಸ್ಪ್ರೆಸ್, ಮುಂಡ್ಲಿ, ಜಾರ್ಕಳ, ಕೆ.ಎಚ್.ಬಿ., ನಕ್ರೆ, ಪದವು ಮತ್ತು ಬಂಡಿಮಠ ಫೀಡರ್‌ಗಳಲ್ಲಿ ಮುಂಡ್ಲಿ, ತೆಳ್ಳಾರು, ಪಲಾಯಿಪಕ್ಯಾರು, ಕಜೆ, ಪೊಲ್ಲಾರು, ಉದ್ದಪಲ್ಕೆ, ಬಂಗ್ಲೆಗುಡ್ಡೆ, ಬಂಡೀಮಠ, ಕಲ್ಲೊಟ್ಟೆ, ಪೆರ್ವಾಜೆ, ಪರಪ್ಪು, ಗುಂಡ್ಯಡ್ಕ, ಪದವು, ಬೊರ್ಗಲ್‌ಗುಡ್ಡೆ, ಕುಂಟಾಡಿ, ಪಳ್ಳಿ, ಆನಂದಿ ಮೈದಾನ, ನಕ್ರೆ, ಪೊಸನೊಟ್ಟು, ಕುಕ್ಕುಂದೂರು, ಅಯ್ಯಪ್ಪನಗರ, ಪಿಲಿಚಂಡಿ ಸ್ಥಾನ, ಗಣಿತನಗರ, ಜಾರ್ಕಳ, ದುರ್ಗಾ, ಮಲೆಬೆಟ್ಟು, ಕಡಂಬಳ, ಹೆರ್ಮುಂಡೆ, ಚಿಕ್ಕಾಲ್ ಬೆಟ್ಟು, ಮಂಗಿಲಾರು, ಅಜೆಕಾರು, ಅಂಡಾರು, ಕಡ್ತಲ,
ಕುಕ್ಕುಜೆ, ಶಿರ್ಲಾಲು, ಕಾಡುಹೊಳೆ, ಕಾರ್ಕಳ ಟೌನ್, ಬೈಲೂರು, ನೀರೆ, ಕೌಡೂರು, ಬೈಲೂರು ಟೌನ್, ಟಿ.ಎಂ.ಸಿ. ವಾಟರ್ ಸಫ್ಲೆ, ಕೆ,ಹೆಚ್,ಬಿ. ಕೊಲೋನಿ, ಜೋಡುರಸ್ತೆ, ಹಿರ್ಗಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 20 ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

33/11 ಕೆ.ವಿ ಹೆಬ್ರಿ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11 ಕೆ.ವಿ ಹೆಬ್ರಿ, ಫೀಡರಿನಲ್ಲಿ ವ್ಯವಸ್ಥಾ ಸುಧಾರಣಾ ಕಾಮಗಾರಿ ಹಾಗೂ ಮಾರ್ಗನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹೆಬ್ರಿಪೇಟೆ, ಗುಳಿಬೆಟ್ಟು, ಮಠದಬೆಟ್ಟು, ಬಂಗಾರಗುಡ್ಡೆ, ರಾಜೀವನಗರ, ಇಂದಿರಾನಗರ, ಹೆಬ್ರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 20 ರಂದು ಬೆಳಗ್ಗೆ 9 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ವರಾಹಿ ವಿದ್ಯುದಾಗಾರದಲ್ಲಿ “Black Start Procedure” ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 110 ಕೆ.ವಿ ಮಣಿಪಾಲ, ನಿಟ್ಟೂರು, ಬ್ರಹ್ಮಾವರ, 33 ಕೆ.ವಿ ಕುಂಜಿಬೆಟ್ಟು, 33 ಕೆ.ವಿ ಮಲ್ಪೆ, 33 ಕೆ.ವಿ ಉದ್ಯಾವರ, 33 ಕೆ.ವಿ ಶಿರ್ವ ಫೀಡರಿನಲ್ಲಿ ಉಡುಪಿ ತಾಲೂಕು (ನಗರಸಭಾ ಪ್ರದೇಶ ಸಹಿತ), ಮಣಿಪಾಲ(ನಗರ ಸಹಿತ) ಉಪವಿಭಾಗ ಏರಿಯಾ, ಬ್ರಹ್ಮಾವರ ತಾಲೂಕು, ಕಾಪು ತಾಲೂಕು (ಪುರಸಭಾ ಪ್ರದೇಶ ಸಹಿತ) ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 20 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2
ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ಅನಿಯಮಿತ ವಿದ್ಯುತ್ ವ್ಯತ್ಯಯವಾಗಲಿದೆ.

110/33/11 ಕೆ.ವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಇಂದ್ರಾಳಿ ಫೀಡರಿನಲ್ಲಿ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಹಯಗ್ರೀವನಗರ, ಲಕ್ಷ್ಮೀಂದ್ರನಗರ, ಇಂದ್ರಾಳಿ, ರೈಲ್ವೆ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 20 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/11ಕೆವಿ ಬ್ರಹ್ಮಾವರ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ ಮಟಪಾಡಿ, ಚೇರ್ಕಾಡಿ, ಕೊಕ್ಕರ್ಣೆ ಫೀಡರ್ ಮಾರ್ಗದಲ್ಲಿ ಹಾಗೂ 220/110/11ಕೆ.ವಿ ಹೆಗ್ಗುಂಜೆ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಡುವ 11 ಕೆ.ವಿ ಹೆಗ್ಗುಂಜೆ ಫೀಡರ್ ಮಾರ್ಗದಲ್ಲಿ ಮತ್ತು 110/11 ಕೆ.ವಿ ನಿಟ್ಟೂರು ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ ಕಲ್ಯಾಣಪುರ ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಟಪಾಡಿ, ರಾಮನಕುದ್ರು, ಕೊಳಂಬೆ, ಅಗ್ರಹಾರ, ಚಾಂತಾರು, ಹೇರೂರು,
ಕುಂಜಾಲು, ಆರೂರು, ಚೇರ್ಕಾಡಿ, ಹಲುವಳ್ಳಿ, ಪಡುನೀಲಾವರ, ಎಳ್ಳಂಪಳ್ಳಿ, ತಡೆಕಲ್ಲು, ಪ್ರಗತಿನಗರ, ಜಾರ್ಜೆಡ್ಡು, ಗಣೇಶ್ ಕಲಾಮಂದಿರ, ಕೆ.ಕೆ.ಪಾರ್ಮ್ಸ್, ಹೆಗ್ಗುಂಜೆ, ಕಾಡೂರು, ಪೆಜಮಂಗೂರು, ಕೊಕ್ಕರ್ಣೆ, ಕೆಂಜೂರು, ಸಂತೆಕಟ್ಟೆ, ನೇಜಾರು, ಮೂಡುತೋನ್ಸೆ, ಕೋಡಿಬೆಂಗ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 20 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

33/11 ಕೆ.ವಿ ಗಂಗೊಳ್ಳಿ ವಿದ್ಯುತ್ ಉಪಕೇಂದ್ರದಲ್ಲಿ 11ಕೆ.ವಿ ಮಾರ್ಗದ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 33/11 ಕೆ.ವಿ ಗಂಗೊಳ್ಳಿ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಗಂಗೊಳ್ಳಿ, ಮುಳ್ಳಿಕಟ್ಟೆ ಮತ್ತು ತ್ರಾಸಿ ಫೀಡರುಗಳಲ್ಲಿ ಗಂಗೊಳ್ಳಿ, ಮುಳ್ಳಿಕಟ್ಟೆ, ಹೊಸಾಡು, ಗುಜ್ಜಾಡಿ ಮತ್ತು ತ್ರಾಸಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 20 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುವುದು.

110/33/11ಕೆ.ವಿ ಕುಂದಾಪುರ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಅಂಪಾರು, ಬಳ್ಕೂರು, ಜಪ್ತಿ ವಾಟರ್ ಸಪ್ಲೈ ಮತ್ತು ಜಪ್ತಿ ಮಾರ್ಗಗಳಲ್ಲಿ ಟ್ರೀ ಟ್ರಿಮ್ಮಿಂಗ್ ಮತ್ತು ಮಾರ್ಗ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜಪ್ತಿ, ಹೊಂಬಾಡಿ-ಮಂಡಾಡಿ, ಕಾಳಾವರ, ಮೊಳಹಳ್ಳಿ, ಅಸೋಡು, ಕೊರ್ಗಿ, ಯಡಾಡಿ-ಮತ್ಯಾಡಿ, ಅಂಪಾರು, ಹಳ್ನಾಡು, ಕಾವ್ರಾಡಿ, ಶಂಕರನಾರಾಯಣ, ಕೋಣಿ, ಬಳ್ಕೂರು, ಕುಂದಾಪುರ ಪುರಸಭೆಯ ಕುಡಿಯುವ ನೀರಿನ ಸ್ಥಾವರ, ಬಸ್ರೂರು, ಆನಗಳ್ಳಿ ಮತ್ತು ಕಂದಾವರ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 20 ರಂದು ಬೆಳಗ್ಗೆ 10 ರಿಂದ ಸಂಜೆ 5 ರ ವರೆಗ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಮಾಡಲಾಗುತ್ತದೆ.

33/11 ಕೆ.ವಿ ಹೆಬ್ರಿ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11 ಕೆ.ವಿ ಶಿವಪುರ, ಚಾರ, ಮುದ್ರಾಡಿ ಫೀಡರಿನಲ್ಲಿ ವ್ಯವಸ್ಥಾ ಸುಧಾರಣಾ ಕಾಮಗಾರಿ ಹಾಗೂ ಮಾರ್ಗನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಚಾರ, ಹೊಸೂರು, ಶಿವಪುರ, ಕೆರೆಬೆಟ್ಟು, ಸರ್ಕಾರಿ ಆಸ್ಪತ್ರೆ ಬಳಿ, ಮುದ್ರಾಡಿ, ಭಟ್ಟಂಪಳ್ಳಿ, ಪಾಂಡುಕಲ್ಲು, ಎಳ್ಳಾರೆ, ಶಂಕರಲಿಂಗೇಶ್ವರ ದೇವಸ್ಥಾನದ ಬಳಿ, ಮುಳ್ಳುಗುಡ್ಡೆ,
ಕನ್ಯಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 21 ರಂದು ಬೆಳಗ್ಗೆ 9 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/33/11 ಕೆ.ವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ವಿ.ಪಿ.ನಗರ ಮತ್ತು ವಿ.ಆರ್.ನಗರ ಫೀಡರಿನಲ್ಲಿ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಸಿಂಡಿಕೇಟ್ ಸರ್ಕಲ್, ಎಂ.ಜಿ.ಸಿ ಸ್ಕೂಲ್, ಬಿ.ಎಸ್.ಎನ್.ಎಲ್, ಟೆಲಿಫೋನ್ ಎಕ್ಸ್ ಚೇಂಜ್, ವಿದ್ಯಾರತ್ನ ನಗರ, ಡಿ.ಸಿ ಆಫೀಸ್, ಆರ್.ಟಿ.ಓ ಆಫೀಸ್, ಪೆರಂಪಳ್ಳಿ, ಸಗ್ರಿ ನೋಳೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 21 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/11ಕೆ.ವಿ ವಿದ್ಯುತ್ ವಿತರಣಾ ಸ್ಥಾವರ ನಂದಿಕೂರು ವಿದ್ಯುತ್ ಉಪಕೇಂದ್ರದಲ್ಲಿ 110 ಕೆ.ವಿ ಕೇಮಾರ್ ಬೇ, 110 ಕೆ.ವಿ ಮುಲ್ಕಿ ಬೇ, 110 ಕೆ.ವಿ ಬೆಳ್ಮಣ್ ಬೇ, ಪರಿವರ್ತಕ-1 ಮತ್ತು 2 ಬೇ, ಪಿಟಿ ಬೇ ಮತ್ತು ಎಲ್ಲಾ 11 ಕೆ.ವಿ ಉಪಕರಣಗಳ ನಿರ್ವಹಣೆ ಕೆಲಸವನ್ನು ಹಮ್ಮಿಕೊಂಡಿರುವುದರಿಂದ, 110/11 ಕೆ.ವಿ ನಂದಿಕೂರು ಎಂ.ಯು.ಎಸ್.ಎಸ್ ನಲ್ಲಿ ಹೊರಡುವ ಎಲ್ಲಾ 11 ಕೆ.ವಿ ಫೀಡರ್‌ಗಳಲ್ಲಿ ಜೂನ್ 22 ರಂದು ಬೆಳಿಗ್ಗೆ 10 ಘಂಟೆಯಿಂದ ಸಂಜೆ 4 ರ ವರೆಗೆ ಎರ್ಮಾಳು, ತೆಂಕ, ಪೂಂದಾಡು, ಅದಮಾರು, ಬಡಾ ಯಾಶ್ ಟೆಕ್ ಪ್ರೈ ಲಿ, ಹೆಜಮಾಡಿ, ಅವರಾಲು, ಇಂಡಸ್ಟ್ರಿಯಲ್ ಲೇ ಔಟ್, ಪಲಿಮಾರು, ಸಾಂತೂರು, ನಂದಿಕೂರು, ಎನ್.ಎಸ್ ರೋಡ್, ಇನ್ನಾ ಅಡ್ವೆ, ನಡ್ಸಾಲು, ಪಡುಬಿದ್ರೆ, ಎಸ್.ಎಸ್ ರೋಡ್, ಡೌನ್‌ಟೌನ್, ಬರ್ಪಾಣಿ, ಪಣಿಯೂರು, ಎಲ್ಲೂರು, ಕುಂಜಾನುಗುಡ್ಡೆ, ಗುರುಗುಂಡಿ, ಕುತ್ಯಾರು, ಕಿನ್ನಿಗೋಳಿ ವಾಟರ್ ಸಪ್ಲೈ, ಬ್ರೈಟ್ ಫ್ಲೆಕ್ಸಿ ಇಂಡಸ್ಟ್ರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.