ಉಡುಪಿ: ಲೈನ್ ಶಿಫ್ಟಿಂಗ್ ಕಾಮಗಾರಿ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ 110 ಕೆ.ವಿ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಬೈಲೂರು ಎಕ್ಸ್ಪ್ರೆಸ್, ಕೆ.ಹೆಚ್.ಬಿ, ಪದವು ಮತ್ತು ನಕ್ರೆ ಫೀಡರ್ಗಳ ಬೈಲೂರು, ನೀರೆ, ಎರ್ಲಪಾಡಿ, ಕೌಡೂರು, ಪರಪು, ಗುಂಡ್ಯಡ್ಕ, ಬೋರ್ಗಲ್ ಗುಡ್ಡೆ, ಕುಂಟಾಡಿ, ಪಳ್ಳಿ, ಆನಂದಿ ಮೈದಾನ, ನಕ್ರೆ, ಪೊಸನೊಟ್ಟು, ಜಾರ್ಕಳ, ಕೆ.ಹೆಚ್.ಬಿ. ಕಾಲೋನಿ, ಜೋಡುರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾರ್ಚ್ 31 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.