ಉಡುಪಿ: ಡಿ. 31 ರಂದು ವಿದ್ಯುತ್ ವ್ಯತ್ಯಯ

ಉಡುಪಿ: 110/33/11 ಕೆವಿ ವಿದ್ಯುತ್ ಸ್ಥಾವರ ಮಣಿಪಾಲದಲ್ಲಿ 110ಕೆ.ವಿ ಬಸ್‌ನ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಸದರಿ ಸ್ಥಾವರದಿಂದ ಹೊರಡುವ 110ಕೆ.ವಿ ಮಣಿಪಾಲ, 110ಕೆ.ವಿ ನಿಟ್ಟೂರು, 110ಕೆ.ವಿ ಬ್ರಹ್ಮಾವರ, 33ಕೆ.ವಿ ಶಿರ್ವ, 33ಕೆ.ವಿ ಕುಂಜಿಬೆಟ್ಟು 1 ಮತ್ತು 2 ಮಾರ್ಗಗಳಲ್ಲಿ, 33 ಕೆ.ವಿ ಮಲ್ಪೆ/ಉದ್ಯಾವರ ಹಾಗೂ ಎಲ್ಲಾ 11ಕೆ.ವಿ ಫೀಡರಿನಲ್ಲಿ ಉಡುಪಿ, ಮಣಿಪಾಲ, ಕುಂಜಿಬೆಟ್ಟು, ನಿಟ್ಟೂರು, ಮಲ್ಪೆ, ಉದ್ಯಾವರ, ಶಿರ್ವ, ಬ್ರಹ್ಮಾವರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿಸೆಂಬರ್ 31 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.