ಉಡುಪಿ: 110/11 ಕೆ.ವಿ ಬ್ರಹ್ಮಾವರ ಉಪವಿದ್ಯುತ್ ಕೇಂದ್ರದಂದ ಹೊರಡುವ 11 ಕೆವಿ ಚಾಂತಾರು, ಮಟಪಾಡಿ ಹಾಗೂ 110/11ಕೆವಿ ನಿಟ್ಟೂರು ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಕಲ್ಯಾಣಪುರ ಫೀಡರಿನಲ್ಲಿ
ಹೆಚ್.ಟಿ ಮಾರ್ಗ ನಿರ್ವಹಣೆ, ಹೆಚ್.ಟಿ/ಎಲ್.ಟಿ ಮಾರ್ಗ ಸ್ಥಳಾಂತರ, ಟ್ರೀ ಕಟ್ಟಿಂಗ್ ಮತ್ತು ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಗ್ರಹಾರ, ನಂದಿಗುಡ್ಡೆ, ಕೊಳಂಬೆ, ತೊಂಬಟ್ಟುಕೆರೆ, ಶ್ರೀಕೃಷ್ಣಪೌಲ್ಟ್ರಿ ಫಾರ್ಮ್, ಮಟಪಾಡಿ, ಸಂತೆಕಟ್ಟೆ, ನೇಜಾರು, ಮೂಡುತೋನ್ಸೆ, ಕೋಡಿಬೆಂಗ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾರ್ಚ್ 2 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.