ಕಾರ್ಕಳ: ಜ.20 ರಂದು ವಿದ್ಯುತ್ ವ್ಯತ್ಯಯ

ಕಾರ್ಕಳ: ಜನವರಿ 20 ರಂದು 110 ಕೆ.ವಿ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ ಪರಶುರಾಮ ಥೀಮ್ ಪಾರ್ಕಿನ ಕಾಮಗಾರಿ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಸದರಿ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಬೈಲೂರು ಎಕ್ಸ್ಪ್ರೆಸ್ ಫೀಡರ್‌ಗಳ ಬೈಲೂರು, ಜಾರ್ಕಳ, ಪಳ್ಳಿ, ನೀರೆ, ಎರ್ಲಪಾಡಿ, ಕೌಡೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.