ನವದೆಹಲಿ: ಬಡತನವನ್ನು ಹೋಗಲಾಡಿಸಲು ನಾವು ಬಡವರನ್ನು ಬಲಪಡಿಸಬೇಕು. ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಮೂಲಕ ಅವರನ್ನು ಸಬಲೀಕರಣಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪಿಎಂಎವೈ ಅಡಿಯಲ್ಲಿ ಮಧ್ಯಪ್ರದೇಶದ ಗ್ರಾಮೀಣ ಭಾಗಗಳಲ್ಲಿ ನಿರ್ಮಿಸಲಾದ 1.75 ಲಕ್ಷ ಮನೆಗಳ ಗೃಹಪ್ರವೇಶದ ವರ್ಚುವಲ್ ಸಮಾರಂಭದಲ್ಲಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಯೋಜನೆಯ ಕೆಲವು ಫಲಾನುಭವಿಗಳೊಂದಿಗೆ ಆನ್ಲೈನ್ ಮೂಲಕ ಸಂವಹನ ನಡೆಸಿದರು.












