ಆಲೂಗಡ್ಡೆ ಎಲ್ಲಾ ಋತುಗಳಲ್ಲಿ ಲಭ್ಯವಿದ್ದು, ಜನರ ಬಹಳ ಇಷ್ಟ ಪಟ್ಟು ತಿನ್ನುತ್ತಾರೆ. ಇದು ನಾಲಿಗೆಗೆ ರುಚಿ ನೀಡುವುದು ಮಾತ್ರವಲ್ಲ, ಪೋಷಕಾಂಶಗಳಿಂದ ಸಮೃದ್ಧವಾಗಿದೆ ಎಂದು ನಂಬಲಾಗಿದೆ.
ಆದರೆ ಆಲೂಗಡ್ಡೆಯನ್ನು ಅತಿಯಾಗಿ ತಿನ್ನುವುದರಿಂದ ಹಲವಾರು ರೀತಿಯಲ್ಲಿ ಕೆಟ್ಟ ಪರಿಣಾಮಗಳು ಬೀರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕಾರಕ:
ಆಲೂಗಡ್ಡೆ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ. ಇದು ಫೈಬರ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಬಿ 6 ನಂತಹ ಇತರ ಪ್ರಮುಖ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಆದರೆ ಇವುಗಳ ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತದೆ. ಹೆಚ್ಚು ಆಲೂ ಅಥವಾ ಬಟಾಟೆ ತಿನ್ನುವುದರಿಂದ ದೇಹದಲ್ಲಿ ನೋವಿನ ಜೊತೆಗೆ ಕಾಲು ನೋವು ಕೂಡ ಉಂಟಾಗುತ್ತದೆ. ಮಧುಮೇಹ ಇರುವವರು ಆಲೂಗಡ್ಡೆ ತಿನ್ನದಿರುವುದು ಉತ್ತಮ. ಏಕೆಂದರೆ ಆಲೂಗಡ್ಡೆಯಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್ ಅಂಶದಿಂದಾಗಿ, ಸಕ್ಕರೆ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಮಧುಮೇಹ ಹೊಂದಿರುವವರು ಆಲೂಗಡ್ಡೆ ತಿನ್ನದಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ತೂಕ ಹೆಚ್ಚಾಗಲು ಕಾರಣ.!:
ಅತಿಯಾಗಿ ಆಲೂ ತಿನ್ನುವುದರಿಂದ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಆಲೂಗಡ್ಡೆಯಲ್ಲಿ ಹೆಚ್ಚಿನ ಕ್ಯಾಲೊರಿಗಳಿವೆ. ಇವುಗಳನ್ನು ಪದೇ ಪದೇ ಸೇವನೆ ಮಾಡುವುದು ದೇಹದ ತೂಕ ಹೆಚ್ಚಾಗಲು ಕಾರಣವಾಗಬಹುದು. ವಿಶೇಷವಾಗಿ ಹುರಿದು ಅಥವಾ ಚೀಸ್ ಮತ್ತು ಇತರ ಪದಾರ್ಥಗಳ ಜೊತೆಗೆ ಸೇವನೆ ಮಾಡಿದರೆ ತೂಕ ಹೆಚ್ಚಾಗುವ ಅಪಾಯ ಹೆಚ್ಚಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಮಧುಮೇಹ, ಬಿಪಿ ಇರುವವರು ಆಲೂಗಡ್ಡೆ ತಿನ್ನದಿರುವುದು ಉತ್ತಮ:
ಅತಿಯಾದ ಆಲೂಗಡ್ಡೆ ತಿನ್ನುವುದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುವುದಲ್ಲದೇ, ಹೊಟ್ಟೆ ಉಬ್ಬರ, ಗ್ಯಾಸ್ ಹೆಚ್ಚಾಗಲು ಕಾರಣವಾಗಬಹುದು. ಜೊತೆಗೆ ಇದರ ಅತಿಯಾದ ಸೇವನೆ ಪೌಷ್ಠಿಕಾಂಶದ ಅಸಮತೋಲನಕ್ಕೆ ಕಾರಣವಾಗುತ್ತದೆ. ಹಾಗಾಗಿ ಆಲೂಗಡ್ಡೆಯನ್ನು ಹುರಿದು ಅಥವಾ ಅದರಿಂದ ಮಾಡಿದ ಚಿಪ್ಸ್ ತಿನ್ನುವುದು ಒಳ್ಳೆಯದಲ್ಲ. ಇವು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಜೊತೆಗೆ ಮಧುಮೇಹ ಮತ್ತು ಬಿಪಿಯಂತಹ ಆರೋಗ್ಯ ಸಮಸ್ಯೆ ಇರುವವರು ಆಲೂಗಡ್ಡೆಯನ್ನು ತಿನ್ನದಿರುವುದು ಬಹಳ ಒಳ್ಳೆಯದು. ಅಲ್ಲದೆ ಹೊಟ್ಟೆಯ ಸುತ್ತಲೂ ಕೊಬ್ಬು ಸಂಗ್ರಹವಾಗಿರುವವರು ಕೂಡ ಆಲೂಗಡ್ಡೆಯಿಂದ ದೂರವಿರುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.












