ಸ್ವಾತಂತ್ರ್ಯಾ ನಂತರದ ಆರ್ಥಿಕ ನೀತಿಗಳು ಈಗಿನ ಪರಿಸ್ಥಿತಿಗೆ ಕಾರಣ – ಪ್ರಸನ್ನ ಉಪ್ಪುಂದ

ಉಪ್ಪುಂದ: ಸ್ವಾತಂತ್ರ್ಯಾ ನಂತರ ತೆಗೆದುಕೊಳ್ಳಲಾದ ಆರ್ಥಿಕ ಅಭಿವೃದ್ಧಿಯ ಮಾದರಿಯೇ ಈಗಿನ ಪರಿಸ್ಥಿತಿಗೆ ಕಾರಣ. ಬಂಡವಾಳಶಾಹಿ ಉದ್ಯಮದ ಉದ್ದೇಶ ಲಾಭವನ್ನು ಹೆಚ್ಚಿಸುವುದೇ ಹೊರತು ಉದ್ಯೋಗ ಸೃಷ್ಟಿಯಲ್ಲ.

ದೊಡ್ಡ ಕೈಗಾರಿಕೆಗಳು ಮತ್ತು ಮುಂದುವರಿದ ತಂತ್ರಜ್ಞಾನವು ಉದ್ಯೋಗದ ಸ್ವರೂಪವನ್ನು ಬದಲಿಸುತ್ತಾ ಹೋಗುವುದಲ್ಲದೆ, ಉದ್ಯೋಗಗಳನ್ನು ಕಡಿತಗೊಳಿಸುತ್ತದೆ. ಈ ಕಾರಣದಿಂದಲೇ ಯುರೋಪ್, ಅಮೇರಿಕಾ ಚೀನಾಗಳಲ್ಲಿ ನಿರುದ್ಯೋಗ ಹೆಚ್ಚಾಗಿರುವುದು. ಭಾರತ ಇದಕ್ಕೆ ಹೊರತಾಗಿರಲು ಅಸಾಧ್ಯ. ಆದ್ದರಿಂದ ಜನಸಂಖ್ಯೆ ಹೆಚ್ಚಿರುವ ಭಾರತವು ಉದ್ಯೋಗವನ್ನು ಉತ್ತೇಜಿಸುವ ಆರ್ಥಿಕ ನೀತಿಗಳನ್ನು ಅವಲಂಬಿಸಬೇಕಾಗಿದೆ ಎಂದು ಸ್ವಾವಲಂಬಿ ಭಾರತ ಅಭಿಯಾನದ ಉಡುಪಿ ಜಿಲ್ಲಾ ಸಹ ಸಂಯೋಜಕ ಪ್ರಸನ್ನ ಉಪ್ಪುಂದ ಹೇಳಿದರು.ಇವರು ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪುಂದ ಇಲ್ಲಿ ನಡೆದ ಸ್ವಾವಲಂಬಿ ಭಾರತ ಅಭಿಯಾನದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಕಾಶ್ ಭಟ್ ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಯಾದವ್ ವಿ ಕರ್ಕೆರಾ , ಉಪಸ್ಥಿತರಿದ್ದರು. ರಾಘವೇಂದ್ರ ಬಿ.ಕೆ ಉಪ್ಪುಂದ ಸ್ವಾಗತಿಸಿದರು.ತುಳಸಿದಾಸ್ ಮೋಗೆರ್ ಶಿರೂರು ನಿರೂಪಿಸಿದರು. ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮದಡಿಯಲ್ಲಿ ಹೊಸ ಉದ್ಯಮವನ್ನು ಆರಂಭಿಸಿದ ಪವನ್ ಮೇಸ್ತ ಶಿರೂರು ತಮ್ಮ ಅನುಭವವನ್ನು ವಿಧ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ವಿದ್ಯಾರ್ಥಿಗಳಿಗೆ ಪ್ರೊಜೆಕ್ಟರ್ ಮೂಲಕ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಪ್ರದರ್ಶಿಸಲಾಯಿತು.