ಕಾಪು: ಶ್ರೀಹಳೇ ಮಾರಿಯಮ್ಮ ದೇವಳದ ಸುತ್ತು ಪೌಳಿ ಜೀರ್ಣೋದ್ದಾರ ನಿಮಿತ್ತ ವೆಂಕಟರಮಣ ಸನ್ನಿಧಿಯಲ್ಲಿ ಪೂಜೆ

ಕಾಪು: ಇತಿಹಾಸ ಪ್ರಸಿದ್ಧ ಕಾಪು ಶ್ರೀಹಳೇ ಮಾರಿಯಮ್ಮ ದೇವಳದ ಸುತ್ತು ಪೌಳಿ ಜೀರ್ಣೋದ್ಧಾರ ಯೋಜನೆಯ ಪೂರ್ವಭಾವಿಯಾಗಿ ಇಂದು ಶ್ರೀ ಹರಿ ಗುರುಗಳ ಸ್ಮರಣ ಪೂರ್ವಕ ಒಡೆಯ ಕಾಪು ಶ್ರೀ ವೆಂಕಟರಮಣ ದೇವರ ಸನ್ನಿಧಿಯಲ್ಲಿ ಕಾಪು ಪೇಟೆಯ ಸಮಸ್ತರು ಮಹಾ ಪ್ರಾರ್ಥನೆ ಸಲ್ಲಿಸಿ, ನಂತರ ಶ್ರೀ ದೇವಿಯ ಸನ್ನಿಧಾನದಲ್ಲಿ ಮಹಾ ಪ್ರಾರ್ಥನೆ, ಜೀರ್ಣೋದ್ಧಾರ ನಿಧಿ ಸ್ಥಾಪನೆ, ಮುಷ್ಟಿ ಕಾಣಿಕೆ ಸಮರ್ಪಣೆ, ಮಹಾ ಸಂಕಲ್ಪ ಕಾರ್ಯಕ್ರಮ ದೇವಳದ ಅರ್ಚಕ ವೃಂದ, ಆಡಳಿತ ಮಂಡಳಿ ಮೊಕ್ತೇಸರರು, ಸದಸ್ಯರು, ಕಾಪು ಪೇಟೆಯ ಹತ್ತು ಸಮಸ್ತರು, ಊರ ಪರವೂರ ಭಕ್ತಾದಿಗಳ ಸಮ್ಮುಖದಲ್ಲಿ ಜರುಗಿತು.

ಶ್ರೀ ಸನ್ನಿಧಿಯಲ್ಲಿ ಭಕ್ತಾದಿಗಳಿಗೆ ಮುಷ್ಟಿ ಕಾಣಿಕೆ ಸಮರ್ಪಿಸಲು ಅವಕಾಶ ಇರುತ್ತದೆ.