ಮಂಗಳೂರಿನಲ್ಲಿ ಪೆಜಕಾಯಿ ಕೊಯ್ದು ಸಂಭ್ರಮಿಸಿದ ಕರಾವಳಿ ಕುವರಿ ಪೂಜಾ ಹೆಗ್ಡೆ

ಮಂಗಳೂರು: ತಮ್ಮ ಚಿತ್ರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಪ್ರಚಾರ ಕಾರ್ಯ ಹಾಗೂ ಚಿತ್ರ ಬಿಡುಗಡೆಯಲ್ಲಿ ವ್ಯಸ್ತರಾಗಿದ್ದ ಪೂಜಾ ಹೆಗ್ಡೆ, ತಮ್ಮ ಹುಟ್ಟೂರಿಗೆ ಸಣ್ಣದೊಂದು ಭೇಟಿ ನೀಡಿದ್ದು, ಆ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Image

“ಎ ಕ್ವಿಕ್ ಟ್ರಿಪ್ ಬ್ಯಾಕ್ ಹೋಮ್” ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮತ್ತು ವಿಡೀಯೋ ಹಂಚಿಕೊಂಡಿರುವ ಅವರು, ಮಂಗಳೂರಿನಲ್ಲಿರುವ ತಮ್ಮ ಮನೆಯ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಮಂಗಳೂರಿನ ಜನತೆಗೆ ಚಿರಪರಿಚಿತ “ಪೆಜಕಾಯಿ” ಕೊಯ್ಯುವ ಚಿತ್ರ, ತಂದೆ ಹಾಗೂ ಮುದ್ದಿನ ಬ್ರೌನಿಯ ಜೊತೆಗಿನ ವೀಡಿಯೊ ಮತ್ತು ತುಳುನಾಡಿನ ದೆಂಜಿ ಸುಕ್ಕದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.