ರಾಜ್ಯ:ಶುಕ್ರವಾರ ಇಷ್ಟರವರೆಗೆ ರಾಜ್ಯದಲ್ಲಿದ್ದ ರಾಜಕೀಯ ಗೊಂದಲಗಳೆಲ್ಲಾ ನಿವಾರಣೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದವರಿಗೆಲ್ಲಾ ಭ್ರಮನಿರಸನವಾಗಿದೆ.
ಯಾಕೆಂದರೆ ರಾಜ್ಯ ರಾಜಕೀಯದ ಗೊಂದಲ ನಿವಾರಣೆಗೆ ಇನ್ನು ಮೂರು ದಿನ ಕಾಯಬೇಕಾಗಿದೆ. ಶುಕ್ರವಾರದ ಕಲಾಪವೂ ಗೊಂದಲಗಳ ನಡುವೆಯೇ ಅಂತ್ಯವಾಗಿದ್ದು ಇನ್ನು ಸೋಮವಾರ ಸ್ಪಷ್ಟ ಚಿತ್ರಣ ಸಿಗಲಿದೆ.
ಬೆಳಗ್ಗೆಯಿಂದಲೂ ಆರಂಭವಾದ ಚರ್ಚೆ ರಾತ್ರಿ 8.30ರವರೆಗೆ ನಡೆಯಿತು. ಚರ್ಚೆಯಲ್ಲಿ ಮತ್ತೇನು ಹೊಸ ತಿರುವುಗಳು ಆಗಲಿಲ್ಲ. ಸದನವನ್ನು ಸೋಮವಾರಕ್ಕೆ ಮುಂದೂಡಲಾಗಿದ್ದು ಅಲ್ಲಿಯವರೆಗೂ ನಿರೀಕ್ಷೆ ಮಾಡುವುದು ಅನಿವಾರ್ಯವಾಗಿದೆ.