ಚಿಕ್ಕಮಗಳೂರು: ಇಲ್ಲಿನ ಹುಸನೇಹಳ್ಳಿಯಲ್ಲಿ ಕಾಫಿ ಎಸ್ಟೇಟ್ ಮಾಲೀಕರೊಬ್ಬರು ಹಣಕಾಸಿನ ವಿಚಾರದಲ್ಲಿ 14 ದಲಿತರನ್ನು ಥಳಿಸಿ ಒಂದು ದಿನದ ಮಟ್ಟಿಗೆ ಅವರೆಲ್ಲರನ್ನು ಬಂಧಿಸಿಟ್ಟಿದ ವಿಚಾರದಲ್ಲಿ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಕಾಫಿ ಎಸ್ಟೇಟ್ ಮಾಲೀಕ ಜಗದೀಶಗೌಡ ಮತ್ತು ಅವರ ಪುತ್ರ ತಿಲಕ್ ವಿರುದ್ಧ ಪೊಲೀಸರು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳು ಮತ್ತು ಎಸ್ಸಿ-ಎಸ್ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಗಾಯಗೊಂಡಿರುವ ಮಹಿಳೆಯೊಬ್ಬರು, ಸಂತ್ರಸ್ತರನ್ನು ಹೊಡೆಯುವ ಎರಡು ವಾರಗಳ ಮೊದಲು, ಗೌಡರು ತಮ್ಮ ಸೋದರ ಮಾವನೊಂದಿಗೆ ಮಕ್ಕಳಿಗೆ ಸಂಬಂಧಿಸಿದ ಸಣ್ಣ ವಿಷಯಕ್ಕೆ ಜಗಳವಾಡಿದ್ದರು ಎಂದು ಹೇಳಿದ್ದಾರೆ. ಎಸ್ಟೇಟ್ ಮಾಲೀಕರು ಮಕ್ಕಳನ್ನು ಅವಾಚ್ಯವಾಗಿ ನಿಂದಿಸಿದ್ದರು ಮತ್ತು ಅದೇ ವಿಷಯದ ಬಗ್ಗೆ ತನ್ನ ಸಹೋದರಿ ಮಾಲೀಕರನ್ನು ಗದರಿಸಿದ್ದಳು ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಹಿಳೆಯ ಸೋದರ ಮಾವ ಈ ಬಗ್ಗೆ ಮಾಲೀಕನನ್ನು ಪ್ರಶ್ನಿಸಿದಾಗ ಆತ ದಲಿತ ಕುಟುಂಬಕ್ಕೆ ಥಳಿಸಲು ಆರಂಭಿಸಿದ. ಈ ಕಾರಣಕ್ಕಾಗಿ ಅವರೆಲ್ಲರೂ ಮರುದಿನ ಕೆಲಸಕ್ಕೆ ಗೈರಾಗಿದ್ದರು. ಎಸ್ಟೇಟ್ ಮಾಲಕ ಕೆಲಸಕ್ಕೆ ಗೈರಾದ ವಿಚಾರ ಪ್ರಶ್ನಿಸಿದಾಗ, ಕೆಲಸಕ್ಕೆ ಬಂದರೆ ನೀವು ಥಳಿಸುತ್ತೀರಿ ಎಂದು ಕೆಲಸಗಾರರು ಕಾರಣ ನೀಡಿದ್ದಕ್ಕೆ, ನಮ್ಮನ್ನು ಒಂದು ದಿನದ ಮಟ್ಟಿಗೆ ಕೋಣೆಯಲ್ಲಿ ಕೂಡಿ ಹಾಕಿದ್ದರು. ತದನಂತರ ತನ್ನ ತಾಯಿಯವರು ಬಂದು ತಮ್ಮನ್ನು ಬಿಡಿಸಿದರು ಎಂದು ಮಹಿಳೆ ಹೇಳಿದ್ದಾರೆ.
ಚಿತ್ರಹಿಂಸೆ ತಾಳಲಾರದ ಮಗಳಿಗೆ ಬೀಗ ಹಾಕಿದ ಕೋಣೆಯೊಳಗೆ ಗರ್ಭಪಾತವಾಗಿದ್ದು, ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಹಿಳೆಯ ತಾಯಿ ಆರೋಪಿಸಿದ್ದಾರೆ.
ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.