ಉಡುಪಿ: ಕಿರುಚಿತ್ರ ಎನ್ನುವುದು ಯಾವುದೇ ಸಾಮಾಜಿಕ ಸಂದೇಶವನ್ನು ಜನರಿಗೆ ಮನಮುಟ್ಟುವಂತೆ ತಿಳಿಸುವ ಪ್ರಬಲ ಮಾಧ್ಯಮವಾಗಿದೆ. ಇಲ್ಲೊಂದು ತಂಡ ಇದೇ ಮಾಧ್ಯಮ ಮೂಲಕ ಸಮಾಜಕ್ಕೆ ಅದ್ಭುತ ಸಂದೇಶ ನೀಡಿದೆ.
ಎಸ್, ಧೀರಜ್ ಆಚಾರ್ಯ ಎರ್ಲಪಾಡಿ ಅವರು ನಟಿಸಿ, ನಿರ್ದೇಶಿಸಿ ನಿರ್ಮಾಣ ಮಾಡಿರುವ ‘ಪೊಕಾವಿ’ ತುಳು ಕಿರುಚಿತ್ರ ಸಮಾಜದ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದೆ.
ಅಂಗವಿಕಲ ಯುವಕ, ಯುವತಿಯರಿಗೆ ಬದುಕು ನೀಡಿ (ಅಂಗವಿಕಲ ಅಣ್ ಪೊಣ್ಣುಲೆಗ್ ಲೈಫ್ ಕೊರ್ಲೆ) ಎಂಬ ಉದ್ದೇಶದಿಂದ ಈ ಕಿರುಚಿತ್ರವನ್ನು ನಿರ್ಮಿಸಲಾಗಿದೆ. ಸೌಂದರ್ಯ, ಹಣ, ವಿದ್ಯೆ ಇದೆಲ್ಲ ಇಲ್ಲದೆಯೂ ಮನುಷ್ಯನಿಗೆ ಬದುಕಲು ಸಾಧ್ಯವಿದೆ. ಬದುಕಿನಲ್ಲಿ ಕೇವಲ ಅಂದಚಂದಕ್ಕೆ ಬೆಲೆ ಕೊಡಬೇಡಿ, ಮಾನವೀಯ ಗುಣವನ್ನು ಬೆಳೆಸಿಕೊಂಡು ಸುಂದರ ಬದುಕನ್ನು ರೂಪಿಸಿಕೊಳ್ಳಿ ಎಂಬ ಉತ್ತಮ ಸಂದೇಶವನ್ನು ಈ ಚಿತ್ರದ ಮೂಲಕ ನೀಡಲಾಗಿದೆ.
‘ಪೊಕಾವಿ’ ತುಳು ಕಿರುಚಿತ್ರವು ಸದಾ ಒತ್ತಡ ಬದುಕಿನಲ್ಲಿ ಇರುವ ಹಾಗೂ ಹಣದ ವ್ಯಾಮೋಹದ ಹಿಂದೆ ಬಿದ್ದಿರುವ ಜನರಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುವ ಕೆಲಸ ಮಾಡಿದೆ.
ಶಂಕರ ಆಚಾರ್ಯ ಮತ್ತು ಕಸ್ತೂರಿ ಆಚಾರ್ಯ ಅವರ ಆಶೀರ್ವಾದದೊಂದಿಗೆ
ಪೊಕಾವಿ ಕಿರುಚಿತ್ರವನ್ನು ನಿರ್ಮಾಣ ಮಾಡಲಾಗಿದೆ.
ಪ್ರಾಯೋಜಕರಾಗಿ ಸಚಿನ್ ಶೆಟ್ಟಿ ಕತಾರ್, ಸತೀಶ್ ರಾವ್ ಕೆ. ಕರ್ವಾಲು, ವಿದ್ಯಾನಂದ ಮಂಗಳೂರು ಕೊಟ್ಟಾರ, ಸುನಿಲ್ ಹೆಗ್ಡೆ ಗೋವಿಂದೂರು, ಮಂಜುನಾಥ್ ಬೈಲೂರು.
ನಟನೆ ಮೊದಲಾದವರು ಸಹಕಾರ ನೀಡಿದ್ದಾರೆ.
ಧೀರಜ್ ಆಚಾರ್ಯ ಎರ್ಲಪಾಡಿ ಅವರು ನಿರ್ಮಾಣ, ನಿರ್ದೇಶಿಸುವ ಜತೆಗೆ ಕಿರುಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ಒದಗಿಸಿದ್ದಾರೆ. ಬಸಂತ್ ಕುಮಾರ್ ಕುತ್ಯಾರು, ಶಿಫಾ ಸೂಡಾ ಅವರ ಸಂಕಲನವಿದೆ. ಕಂಠದಾನ ಕಲಾವಿದರಾಗಿ ಶ್ರೀನಿವಾಸ ಪೂಜಾರಿ ಎರ್ಲಪಾಡಿ, ಅಕ್ಷತಾ ಕುಲಾಲ್ ಸಹಕಾರಿ ನೀಡಿದ್ದಾರೆ. ಸ್ವಸ್ತಿಕ್ ಪ್ರೊಡಕ್ಷನ್ಸ್ ಛಾಯಾಗ್ರಹಣವಿದೆ. ಪ್ರೇಮ್ ಕುಮಾರ್ ಅದ್ಭುತ ಸಂಗೀತ ನೀಡಿದ್ದಾರೆ. ಟೈಟಲ್ ಸಾಂಗ್ ಸಂತೋಷ್ ಸೋನು ಒದಗಿಸಿದ್ದಾರೆ. ಗೌರವ ಪಾತ್ರದಲ್ಲಿ ರಮೇಶ್ ಕಲ್ಲೊಟ್ಟೆ ನೀರೆಬೈಲೂರು ಅಭಿನಯಸಿದ್ದಾರೆ.
ಚಿತ್ರದ ಮುಖ್ಯಭೂಮಿಕೆಯಲ್ಲಿ ಧೀರಜ್ ಆಚಾರ್ಯ ಎರ್ಲಪಾಡಿ, ವಿಶ್ಚಿತ, ಪ್ರಜ್ಞಾ ಭಂಡಾರಿ, ಸುರೇಂದ್ರ ಮೋಹನ್ ಮುದ್ರಾಡಿ, ಸತೀಶ್ ರಾವ್ ಕೆ. ಕರ್ವಾಲು, ಪ್ರಜ್ವಲ್ ಪೂಜಾರಿ, ಪ್ರಜ್ವಲ್, ವೀಕ್ಷಾ, ವಿಕಾಸ್ ದೇವಾಡಿಗ, ಕಾರ್ತಿಕ್ ಕೋಟ್ಯಾನ್, ಸುಶ್ಮಿತಾ, ಅಮಿತಾ, ಶ್ರುತಿಕಾ ಅವರು ಕಾಣಿಸಿಕೊಂಡಿದ್ದಾರೆ.