ಉಡುಪಿ:ಪೊದಾರ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಗಣರಾಜೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಪ್ರಗತಿಪರ ಕೃಷಿಕರು, ಜನನಿ ಫಾರ್ಮ್‌ನ ಸ್ಥಾಪಕರಾದ ನಾಗರಾಜ್ ಧ್ವಜಾರೋಹಣ ಮಾಡಿದರು.
ಮಕ್ಕಳಿಂದ ದೇಶಭಕ್ತಿ ಗೀತೆ ಗಾಯನ ನಡೆಯಿತು. ಶಿಕ್ಷಕಿ ವೇದಾವತಿ ಪುರೋಹಿತ ಮಕ್ಕಳಿಗೆ ನಮ್ಮ ದೇಶದ ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾವಿಧಿ ಬೋಧಿಸಿದರು.
ವಿದ್ಯಾರ್ಥಿಗಳಾದ ಅದಿತ್ ಮತ್ತು ರಶಾದ್ ಗಣರಾಜೋತ್ಸವ ದಿನದ ಮಹತ್ವ ಬಗ್ಗೆ ಭಾಷಣ ಮಾಡಿದರು.
ಶಾಲಾ ಪ್ರಾಂಶುಪಾಲರಾದ ಎಮ್.ಎಸ್.ಹಿರೇಮಠ ಮಾತನಾಡಿ, ನಾವು ನಮ್ಮ ಸ್ವಾತಂತ್ರ್ಯವನ್ನು ಪಡೆಯಲು ಸುಮಾರು ಇನ್ನೂರು ವರ್ಷಗಳ ಕಾಲ ನಮ್ಮ ಹಿರಿಯರ ತ್ಯಾಗ ಬಲಿದಾನವಿದೆ. ಭಾರತೀಯರಾದ ನಾವೆಲ್ಲರೂ ನಮ್ಮ ಸಂವಿಧಾನವನ್ನು ಗೌರವಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿ ತಬ್ಶೀರ್ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಆಯೆಷಾ ಸ್ವಾಗತಿಸಿ ಪ್ರಾರ್ಥನಾ ವಂದಿಸಿದರು.












