ಕುಂದಾಪುರ: ಪಿಎಂ ಕೇರ್ ಫಂಡ್ಗೆ ವೇದಗಣಿತ ಅಧ್ಯಯನ ವೇದಿಕೆಯಿಂದ ಸಂಸದೆ ಶೋಭಾ ಕರಂದ್ಲಾಜೆ ಮೂಲಕ 5 ಲಕ್ಷ ರೂ.ಗಳ ನೆರವು ನೀಡಲಾಗಿದೆ.
ವೈದ್ಯ ಡಾ| ಎಸ್.ಎನ್. ಪಡಿಯಾರ್ ಅವರು ತಮ್ಮ ಸಂಗಮ್ ಬಳಿಯಲ್ಲಿನ ನಿವಾಸದಲ್ಲಿ ಸಂಸದೆ ಮೂಲಕ ಪ್ರಧಾನಿಗೆ 5 ಲಕ್ಷ ರೂ.ಗಳ ನೆರವು ನೀಡಿದರು.
ಈ ಸಂದರ್ಭದಲ್ಲಿ ಮಾಧ್ಯಮದ ಜತೆ ಮಾತನಾಡಿದ ಡಾ| ಪಡಿಯಾರ್, ೨೦ ವರ್ಷಗಳ ಹಿಂದೆ ಸ್ವದೇಶಿ ಜಾಗರಣ ಮಂಚ್ನ ಪಶ್ಚಿಮ ವಿಭಾಗ ಮುಖ್ಯಸ್ಥನಾಗಿದ್ದಾಗ ಕಾರ್ಯಕ್ರಮವೊಂದಕ್ಕೆ ನರೇಂದ್ರ ಮೋದಿ ಬಂದಿದ್ದರು. ಆ ವೇಳೆಯಲ್ಲಿ ಅವರನ್ನು ಭೇಟಿಯಾಗಿ ವೇದಗಣಿತ ಪುಸ್ತಕ ನೀಡಿದ್ದೆ. ವೇದಗಣಿತ ಅಧ್ಯಯನ ವೇದಿಕೆ ಪ್ರಸ್ತುತ ಅಷ್ಟೊಂದು ಪ್ರಮಾಣದಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿಲ್ಲ. ಅದರಲ್ಲಿ ಉಳಿಕೆಯಾದ ಹಣ ನೀಡಿದ್ದೇನೆ ಎಂದರು.
ಇದೇ ವೇಳೆಯಲ್ಲಿ ಪಡಿಯಾರ್ ಅವರ ಪತ್ನಿ ಅರುಣಾ ಅವರು ಸ್ವ ಇಚ್ಛೆಯಿಂದ ವೈಯಕ್ತಿಕ ದೇಣಿಗೆಯ ಚೆಕ್ ಅನ್ನು ಹಸ್ತಾಂತರಿಸಿದರು.
ಈ ಸಂದರ್ಭ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕಿರಣ್ ಕೊಡ್ಗಿ, ತಾಲೂಕು ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ, ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಬೀಜಾಡಿ, ಸತೀಶ್ ಪೂಜಾರಿ ವಕ್ವಾಡಿ, ವಿನೋದ್ರಾಜ್ ಪೂಜಾರಿ, ಪುರಸಭೆ ಸದಸ್ಯ ಸಂತೋಷ್ ಕುಮಾರ್ ಶೆಟ್ಟಿ ಮೊದಲಾದವರು ಇದ್ದರು.