ಕೊಡವೂರು: ಉಜ್ವಲ ಯೋಜನೆ ಮಾಹಿತಿ ಕಾರ್ಯಗಾರ

ಕೊಡವೂರು: ಕೊಡವೂರು ವಾರ್ಡಿನ ಸೇವಾ ಕೇಂದ್ರದಲ್ಲಿ ಕೇಂದ್ರ ಸರಕಾರದ ಉಜ್ವಲ ಯೋಜನೆಯ ಮಾಹಿತಿ ಕಾರ್ಯಗಾರವು ನಡೆಯಿತು.

ಕಾರ್ಯಕ್ರಮವನ್ನು ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್ ಉದ್ಘಾಟಿಸಿದರು.

ಪ್ರಧಾನಿ ಮೋದಿಯು ಬಡ ಜನರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಜಾರಿಗೊಳಿಸುತ್ತಾರೆ. ಅಡುಗೆ ಅನಿಲ ಸಂಪರ್ಕ ಇಲ್ಲದ ಕಡು ಬಡತನದಲ್ಲಿ ಇರುವ ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲ ನೀಡಬೇಕು ಎನ್ನುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಮೂಲಕ ಕೊಡವೂರು ವಾರ್ಡಿನ ಕಟ್ಟ ಕಡೆಯ ವ್ಯಕ್ತಿಗೆ ಈ ಯೋಜನೆಯನ್ನು ತಲುಪಿಸಬೇಕು ಎನ್ನುವ ನಿಟ್ಟಿನಲ್ಲಿ ಶಿಬಿರಗಳನ್ನು ಆಯೋಜಿಸುವ ಪ್ರಯತ್ನ ಕೊಡವೂರು ವಾರ್ಡಿನಲ್ಲಿ ನಡೆಯುತ್ತಿದೆ ಎಂದು ನಗರಸಭಾ ಸದಸ್ಯ ಕೆ. ವಿಜಯ್ ಕೊಡವೂರು ತಿಳಿಸಿದರು.

ಈ ಸಂದರ್ಭದಲ್ಲಿ ಚಂದ್ರಕಾಂತ್, ವಿನಯ್, ಅಖಿಲೇಶ್, ಮತ್ತಿತರರು ಹಾಜರಿದ್ದರು.