ನವದೆಹಲಿ: ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಭೀತಿಯ ವಿಚಾರಗಳ ಕುರಿತು ಪ್ರಧಾನಿ ಮೋದಿ ಅವರು ಇಂದು (ಮಾ.24) ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಭಾರತದಲ್ಲಿ 490ಕ್ಕೂ ಹೆಚ್ಚು ಕೊರೊನಾ ಸೋಂಕಿತರ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಪ್ರಧಾನಿ ಅವರು ಈ ಭಾಷಣಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಮಾ.22 ರಂದು ದೇಶದಲ್ಲಿ ಪ್ರಧಾನಿ ಯವರ ಜನತಾ ಕರ್ಫೂ ಗೆ ವ್ಯಾಪಕ ಬೆಂಬಲ ದೊರಕಿದ್ದು, ಈಗ ದೇಶವ್ಯಾಪಿ ಮಾ.31ರವರೆಗೆ ಲಾಕ್ ಡೌನ್ ಆಗಿರುವ ಕಾರಣ ಈ ವಿಚಾರದ ಬಗ್ಗೆ ಹೇಳಲ್ಲಿದ್ದಾರೆ.