ಪ್ರಧಾನಿ ಮೋದಿ ಬಯೋಪಿಕ್ ರಿಲೀಸ್ ಗೆ ದಿನಾಂಕ ಫಿಕ್ಸ್.. 

ನವದೆಹಲಿ: ಬಹು ನಿರೀಕ್ಷೆಯ ಮೋದಿ ಬಯೋಪಿಕ್ ರಿಲೀಸ್ ಗೆ ಕಾಲ ಕೂಡಿ ಬಂದಿದೆ. ಟ್ರೈಲರ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಮೋದಿ ಸಿನಿಮಾ ಲೋಕಸಭಾ ಚುನಾವಣಾ ಫಲಿತಾಂಶ ಬಂದ ನಂತರ ತೆರೆಗೆ ಬರುತ್ತಿದೆ. ಬಾಲಿವುಡ್ ನಟ ವಿವೇಕ್ ಓಬೆರಾಯ್ ಪ್ರಧಾನಿ ನರೇಂದ್ರ ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇಡೀ ದೇಶವೆ ಕಾತುರದಿಂದ ಕಾಯುತ್ತಿರುವ ಲೋಕ ಸಭಾ ಚುನಾವಣೆಯ ಫಲಿತಾಂಶ ಮೇ 23ಕ್ಕೆ ಹೊರಬೀಳಿದ್ದು, ಅದರ ಮರುದಿನವೆ ಮೇ 24ಕ್ಕೆ ಮೋದಿ ಬಯೋಪಿಕ್ ತೆರೆಗೆ ಬರುತ್ತಿದೆ. ಈ ಬಗ್ಗೆ ಚಿತ್ರತಂಡವೆ ಅಧಿಕೃತವಾಗಿ ಹೇಳಿದೆ.
ಈ ಮೊದಲು ಏಪ್ರಿಲ್ 5ಕ್ಕೆ ತೆರೆಗೆ ಬರಲು ಸಿದ್ಧವಾಗಿತ್ತು. ಆ ನಂತರ ಏಪ್ರಿಲ್ 12ಕ್ಕೆ ರಿಲೀಸ್ ಆಗುತ್ತೆ ಎಂದು ಹೇಳಲಾಗಿತ್ತು ಆದ್ರೆ ಚುನಾವಣಾ ಆಯೋಗ ರಿಲೀಸ್ ಗೆ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ನಿರ್ಮಾಪಕರು ಕೋರ್ಟ್ ಮೆಟ್ಟಿಲೇರಿದ್ದರು ಆದ್ರೂ ಸಿನಿಮಾ ರಿಲೀಸ್ ಆಗಿರಲಿಲ್ಲ. ಚಿತ್ರವನ್ನು ಬಾಲಿವುಡ್ ನಿರ್ದೇಶಕ ಓಮಂಗ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.