ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿಯವರನ್ನು ಮಂಗಳವಾರ ರಾತ್ರಿ ಅಹಮದಾಬಾದ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.
ತಾಯಿಯ ಆರೋಗ್ಯ ವಿಚಾರಿಸಲು ಪ್ರಧಾನಿ ಮೋದಿ ಅಹಮದಾಬಾದಿಗೆ ದೌಡಾಯಿಸಿದ್ದಾರೆ.
#WATCH | PM Modi arrives at UN Mehta Institute of Cardiology & Research Centre in Ahmedabad where his mother Heeraben Modi is admitted
As per the hospital, her health condition is stable. pic.twitter.com/j9Yp3udunB
— ANI (@ANI) December 28, 2022
ಹೀರಾ ಬಾ ನನ್ನು ಅಹಮದಾಬಾದ್ನ ಯುಎನ್ ಮೆಹ್ತಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ರಿಸರ್ಚ್ ಸೆಂಟರ್ಗೆ ದಾಖಲಿಸಲಾಗಿದೆ. ಈ ವರ್ಷದ ಜೂನ್ನಲ್ಲಿ ಹೀರಾಬೆನ್ 100 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿಯ 100 ನೇ ಹುಟ್ಟುಹಬ್ಬವನ್ನು ಆಚರಿಸಲು ಗಾಂಧಿನಗರದಲ್ಲಿ ಅವರನ್ನು ಭೇಟಿಯಾಗಿದ್ದರು. ಇತ್ತೀಚೆಗೆ ಗುಜರಾತ್ ಚುನಾವಣೆಯ ಸಂದರ್ಭದಲ್ಲೂ ತಾಯಿಯನ್ನು ಭೇಟಿಯಾಗಿರುವ ಪ್ರಧಾನಿ ಮೋದಿ, ಪ್ರತಿವರ್ಷವೂ ತಮ್ಮ ಹುಟ್ಟುಹಬ್ಬದಂದು ಮಾಡುತ್ತಿದ್ದ ಭೇಟಿಯನ್ನು ಅನ್ಯಕಾರ್ಯ ನಿಮಿತ್ತ ಮಾಡಲಾಗಿರಲಿಲ್ಲ.