udupixpress
Home Trending 'ಆದಿಪುರುಷ್' ಚಿತ್ರದಲ್ಲಿ ಪ್ರಧಾನಿ ಮೋದಿ ನಟನೆ.?

‘ಆದಿಪುರುಷ್’ ಚಿತ್ರದಲ್ಲಿ ಪ್ರಧಾನಿ ಮೋದಿ ನಟನೆ.?

ಹೈದರಬಾದ್: ‘ರಾಮಾಯಣ’ ಕಥೆಯನ್ನು ಇಟ್ಟಕೊಂಡು ನಿರ್ದೇಶಕ ಓಂ ರಾವುತ್‌ ‘ಆದಿಪುರುಷ್‌’ ಸಿನಿಮಾ ಮಾಡುತ್ತಿದ್ದು, ಇದರಲ್ಲಿ ನಟ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರವನ್ನು 3ಡಿ ತಂತ್ರಜ್ಞಾನದಡಿ ಹಿಂದಿ ಹಾಗೂ ತೆಲುಗಿನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಬಳಿಕ ಕನ್ನಡ, ತಮಿಳು, ಮಲಯಾಳ ಸೇರಿದಂತೆ ಕೆಲವು ವಿದೇಶಿ ಭಾಷೆಗಳಿಗೂ ಡಬ್‌ ಆಗಿ ಬಿಡುಗಡೆಯಾಗಲಿದೆ. 500 ಕೋಟಿ ರೂ. ವೆಚ್ಚದಡಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ‌.2022ಕ್ಕೆ ಈ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಪ್ರಧಾನಿ ಮೋದಿ ನಟನೆ.?
ಈ ನಡುವೆ ಚಿತ್ರತಂಡ ಅಚ್ಚರಿಯ ಮಾಹಿತಿಯೊಂದನ್ನು ಹೊರಹಾಕಿದ್ದು, ಇತ್ತೀಚೆಗೆ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ‘ರಾಮಮಂದಿರ’ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿರುವ ದೃಶ್ಯವನ್ನು ಬಳಸಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಒಂದು ವೇಳೆ ಚಿತ್ರದಲ್ಲಿ ಶಿಲಾನ್ಯಾಸದ ದೃಶ್ಯ ಬಳಸಿಕೊಂಡರೆ ನರೇಂದ್ರ ಮೋದಿ ಅವರೂ ಈ ಚಿತ್ರದ ಒಂದು ಭಾಗವಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಚಿತ್ರತಂಡ ಮಾತ್ರ ರಾಮಮಂದಿರದ ಶಿಲಾನ್ಯಾಸದ ದೃಶ್ಯಗಳನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.