ನವದೆಹಲಿ: ಪರಿಸರ ಕಾಳಜಿ ವ್ಯಕ್ತಪಡಿಸಿರುವ ಬೆಂಗಳೂರಿನ ವಿದ್ಯಾರ್ಥಿಯೊಬ್ಬನನ್ನು ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದ್ದಾರೆ. ಈ ಸಂಬಂಧ ಅವರು ಸಾಮಾಜಿಕ ಜಾಲ ತಾಣದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ವೈದ್ಯರಾಗಿರುವ ದೀಪಕ್ ಕೃಷ್ಣಮೂರ್ತಿ ತಮ್ಮ ಮಗನ ಚಟುವಟಿಕೆ ಕುರಿತಂತೆ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಶೈಕ್ಷಣಿಕ ವರ್ಷ ಕೊನೆಗೊಂಡ ಕೂಡಲೇ ನೋಟ್ ಪುಸ್ತಕದಲ್ಲಿ ಉಳಿದಿರುವ ಹಾಳೆಗಳನ್ನು ಬಳಸಿ ಅಭ್ಯಾಸ ಪುಸ್ತಕ ಮಾಡುವ ಮಗನ ಆಸಕ್ತಿಯನ್ನು ಪ್ರಸ್ತಾಪಿಸಿದ್ದರು.
ಮರ ಉಳಿಸುವ ನಿಟ್ಟಿನಲ್ಲಿ ಮಗ ಈ ರೀತಿ ಮಾಡುತ್ತಿದ್ದಾನೆ ಎಂದು ಹೇಳಿದ್ದರು. ದೀಪಕ್ ಕೃಷ್ಣಮೂರ್ತಿ ಮಾಡಿದ ಪೋಸ್ಟ್ ಪ್ರಧಾನಿ ಮೋದಿ ಅವರ ಗಮನ ಕೂಡ ಸೆಳೆದಿತ್ತು. ಇದು ತುಂಬಾ ಒಳ್ಳೆಯ ಕೆಲಸ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಹಲವು ನೆಟ್ಟಿಗರು ಕೂಡ ಇದಕ್ಕೆ ಧ್ವನಿಗೂಡಿಸಿದ್ದಾರೆ.