ಉಡುಪಿ: ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರ ಚತುರ್ಥ ಮತ್ತು ಪಂಚಮ ಪರ್ಯಾಯದ ಒಂದು ದಿನದ ಯತಿ ಚರಿತೆಯನ್ನು ಕೃತಿ ಮೂಲಕ ಹೊರತಂದ ಉದಯವಾಣಿ ಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೊ ಮೋಹನ್ ಅವರ ಚಿತ್ರ ಕೃತಿ ಎ ಡೇ ವಿತ್ ದಿ ಸೈನ್ಟ್ ಪುಸ್ತಕವನ್ನು ಗುರು ಪೂರ್ಣಿಮಾ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಹಾಗೂ ಸ್ವಾಮೀಜಿ ಅವರ ಆಪ್ತ ಕಾರ್ಯದರ್ಶಿ ಅನಂತ ಡಿ ಪಿ ಅವರು ಇದ್ದರು.