ಗಾಂಧಿನಗರ: ಜೂನ್ 18 ರಂದು ತಾಯಿ ಹೀರಾ ಬಾ 100 ನೇ ವರ್ಷದ ಹುಟ್ಟುಹಬ್ಬದಂದು ತನ್ನ ತಾಯಿಯನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ತಾಯಿಯ ಪಾದಪೂಜೆ ನಡೆಸಿ ಅವರ ಆಶೀರ್ವಾದ ಪಡೆದುಕೊಂಡರು.
ಮೋದಿ ಶನಿವಾರದಂದು ಬೆಳ್ಳಂಬೆಳಗ್ಗೆ ಗುಜರಾತಿನಲ್ಲಿರುವ ತಮ್ಮ ತಾಯಿಯ ಮನೆಗೆ ಭೇಟಿ ನೀಡಿ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ, ಆಶೀರ್ವಾದ ಪಡೆದುಕೊಂಡರು.
“ನನ್ನ ತಾಯಿ ಎಷ್ಟು ಸರಳವಾಗಿದ್ದಾಳೆಯೋ ಅಷ್ಟೇ ಅಸಾಧಾರಣವಾಗಿದ್ದಾಳೆ. ಎಲ್ಲಾ ತಾಯಂದಿರಂತೆಯೆ…ಅಮ್ಮ ಎನ್ನುವುದು ಬರೀ ಶಬ್ದವಲ್ಲ, ಇದರಲ್ಲಿ ಪ್ರೀತಿ, ತಾಳ್ಮೆ, ನಂಬಿಕೆ ಎಷ್ಟೊಂದೆಲ್ಲಾ ಅಡಕವಾಗಿರುವ ಅದು ಬದುಕಿನ ಭಾವವಾಗಿದೆ. ನನ್ನ ತಾಯಿ, ಹೀರಾಬಾ ಇಂದು ಜೂನ್ 18 ರಂದು ನೂರನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ, ಅವರ ಶತಮಾನೋತ್ಸವ ವರ್ಷ ಪ್ರಾರಂಭವಾಗಿದೆ. ನಾನು ನನ್ನ ಸಂತೋಷ ಮತ್ತು ಅದೃಷ್ಟವನ್ನು ಹಂಚಿಕೊಳ್ಳುತ್ತಿದ್ದೇನೆ” ಎಂದು ಪ್ರಧಾನಿ ಮೋದಿ ಟ್ವೀಟಿಸಿದ್ದಾರೆ.
ಇದರ ಜೊತೆಗೆ ತನ್ನ ತಾಯಿಯ ಬಗ್ಗೆ ಬ್ಲಾಗ್ ಕೂಡಾ ಬರೆದಿದ್ದಾರೆ.












