ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಫಾದರ್ ಆಫ್ ಇಂಡಿಯಾ’ ಎಂದಿದ್ದು, ಭಾರತವನ್ನು ಒಗ್ಗಟ್ಟಿನ ಪಥದಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ಮೋದಿ, ತಂದೆಯ ಸ್ಥಾನದಲ್ಲಿ ನಿಂತು ಭಾರತವನ್ನು ಪೋಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಭಾರತದ ಅನೇಕ ಭಿನ್ನಾಭಿಪ್ರಾಯಗಳ ಗೂಡಾಗಿದ್ದು, ಪರಸ್ಪರ ಅಪನಂಬಿಕೆ ಹಾಗೂ ಗೊಂದಲ ಮನೆ ಮಾಡಿತ್ತು. ಆದರೆ ಮೋದಿ ತಂದೆಯ ಸ್ಥಾನದಲ್ಲಿ ನಿಂತು ದೇಶವನ್ನು ಒಗ್ಗೂಡಿಸಿದ್ದಾರೆ. ಮೋದಿ ಅವರ ಕೈಯಲ್ಲಿ ಭಾರತ ಸುರಕ್ಷಿತವಾಗಿದ್ದು, ಭವಿಷ್ಯದತ್ತ ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಅವರು ಅಭಿಪ್ರಾಯಪಟ್ಟಿದ್ದಾರೆ.