ನವದೆಹಲಿ: ಇಂದು ಮಧ್ಯರಾತ್ರಿಯಿಂದ ಭಾರತ ಸಂಪೂರ್ಣ ಲಾಕ್ ಡೌನ್ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯ ಘೋಷಿಸಿದ್ದಾರೆ.ಈ ಮೂಲಕ ಭಾರತ ಕೊರೋನಾ ರೋಗದ ವಿರುದ್ದ ಸಮರ ಸಾರುವಂತೆ ತಿಳಿಸಿದ್ದಾರೆ.
ಇಂದು ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಇಂದು ಮಧ್ಯರಾತ್ರಿಯಿಂದ ಎ.14 ರವರೆಗೆ ದೇಶವು ಸಂಪೂರ್ಣ ಲಾಕ್ ಟೌನ್ ಆಗಲಿದ್ದು, ಇವತ್ತು ರಾತ್ರಿಯಿಂದಲೇ ಜನತಾ ಕರ್ಪೂ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಕೇಂದ್ರ ಸರಕಾರವು ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದೆ.
21 ದಿನ ಮನೆಯಲ್ಲೇ ಇರಿ ನಿಮ್ಮ ಮನೆಯಲ್ಲೇ ಇರಿ
ಕೊರೊನಾ ವೈರಸ್ ಹರಡುವ ಹಿನ್ನಲೆ ಪ್ರತಿ ಗ್ರಾಮ, ಜಿಲ್ಲೆ, ರಾಜ್ಯದ ಜನರಿಗೆ ಇದು ಅನ್ವಯವಾಗಲಿದೆ. ನಿಮ್ಮ ಸುರಕ್ಷತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಲಾಕ್ ಡೌನ್ ವೇಳೆ ಯಾರು ಕೂಡ ಹೋರಬರಬಾರದು. ನೀವು ಎಲ್ಲಿ ಇದ್ದಿರ, ಅಲ್ಲೆ ಇದ್ದು, ನಿಮ್ಮ ಮನೆ ಬಾಗಿಲು ಬಳಿ ನೀವೆ ಲಕ್ಷ್ಮಣರೇಖೆಯನ್ನು ಹಾಕಿಕೊಳ್ಳುವುದರ ಮೂಲಕ ಯಾರು ಮನೆಯಿಂದ ಹೊರಬರಬಾರದು ಇದು ನನ್ನ ಪ್ರಾರ್ಥನೆ ಎಂದು ಜನರಲ್ಲಿ ಮನವಿ ಮಾಡಿಕೊಂಡರು.
ನಿಮ್ಮ ಜೀವ ಉಳಿಸಲು ಲಾಕ್ ಡೌನ್ ಅಗತ್ಯವಾಗಿದೆ ಹಾಗೇಯೆ ಕೊರೊನಾ ವೈರಸ್ ತಡೆಗೆ ೧೫ ಸಾವಿರ ಕೋಟಿ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.