ಅಯೋಧ್ಯಾ: ಜನವರಿ 22 ರಂದು ಪವಿತ್ರ ನಗರದಲ್ಲಿ ಐತಿಹಾಸಿಕ ರಾಮ ಮಂದಿರದ(Ram Mandir) ಶಂಕುಸ್ಥಾಪನೆಯ ನಂತರ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಮೊದಲ ಬಾರಿಗೆ ಲೋಕಸಭೆ ಚುನಾವಣೆಯ ಮೂರನೇ ಹಂತದ ಚುನಾವಣಾ ಪ್ರಚಾರದ ನಡುವೆ ಭಾನುವಾರ ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿದರು.
At Ayodhya, prayed to Prabhu Shri Ram for the well being of my fellow 140 crore Indians. pic.twitter.com/ulwNmktZ2e
— Narendra Modi (@narendramodi) May 5, 2024
ಪ್ರಧಾನಿ ಮೋದಿ ರಾಮಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ ಆ ಬಳಿಕ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಕೂಡ ರಾಮ ಮಂದಿರಕ್ಕೆ ಭೇಟಿ ನೀಡಿ ಪ್ರಧಾನಿ ಭೇಟಿಗೆ ಮುನ್ನ ವ್ಯವಸ್ಥೆ ಪರಿಶೀಲಿಸಿದರು. 2 ಕಿಲೋಮೀಟರ್ ಉದ್ದದ ರೋಡ್ ಶೋನಲ್ಲಿ ಯೋಗಿ ಆದಿತ್ಯನಾಥ್ ಪ್ರಧಾನಿ ಮೋದಿಯವರೊಂದಿಗೆ ಭಾಗವಹಿಸಿದರು.
ಐದನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆಯ ಮತದಾರರು ಮೇ 20 ರಂದು ಮತ ಚಲಾಯಿಸಲಿದ್ದಾರೆ.












