ಬ್ರಹ್ಮಾವರ: ಬ್ರಹ್ಮಾವರ ಗ್ರಾಮಾಂತರ ಬಿಜೆಪಿ ವತಿಯಿಂದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಸವಿನೆನಪಿನ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಕೊಕ್ಕರ್ಣೆಯಲ್ಲಿ ಆಯೋಜಿಸಲಾಯಿತು.
ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷೆ ಲಕ್ಷ್ಮೀ ಅಡಿಗ ಹೊರ್ಲಾಳಿ ಅವರ ಮನೆಯಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯಕ್ , ಬಿಜೆಪಿ ಕೊಕ್ಕರ್ಣೆ ಮಹಾಶಕ್ತಿ ಕೇಂದ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಶ್ರೀ ವಿಜಯಕುಮಾರ್ ಶೆಟ್ಟಿ ಕೆಂಜೂರು, ಸಹಸಂಚಾಲಕ ಮಂಜುನಾಥ ಕೊಕ್ಕರ್ಣೆ, ಪಂಚಾಯಿತಿ ಸದಸ್ಯ ಗಣೇಶ, ಕಾರ್ಯಕರ್ತರಾದ ವಿಶ್ವನಾಥ ಅಡಿಗ ಹೊರ್ಲಾಳಿ, ಅಂಕಿತಾ, ಧನುಷ್, ರಾಕೇಶ್, ದಯಾನಂದ ಶೆಟ್ಟಿ ಹೊರ್ಲಾಳಿ ಮೊದಲಾದವರು ಭಾಗವಹಿಸಿದ್ದರು.