ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದಿಂದ ಗಿಡ ನೆಡುವ ಕಾರ್ಯಕ್ರಮ

ಉಡುಪಿ: ಜಿಲ್ಲೆಯಾದ್ಯಂತ 1000 ಲಕ್ಷ್ಮಣ ಫಲದ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಮುಂದಾಗಿರುವ ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘವು ಕಳೆದ ಒಂದು ವಾರದಲ್ಲಿ ಶಾಲೆ-ಕಾಲೇಜು, ಸಂಸ್ಥೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಲವಾರು ಗಿಡಗಳನ್ನು ನೆಟ್ಟು ಬೇಲಿ ಹಾಕಿ ಪರಿಸರ ರಕ್ಷಣೆಗೆ ತನ್ನಿಂದಾದ ಕೊಡುಗೆ ನೀಡುತ್ತಿದೆ.

ಮುಂದಿನ ವರ್ಷ ಅತ್ಯುತ್ತಮವಾಗಿ ಸಾಕಲ್ಪಟ್ಟ ಗಿಡಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರ್ಮಾವನ್ನೂ ಸಂಘವು ಹಮ್ಮಿಕೊಂಡಿದೆ. ಸಂಘದ ಈ ಕಾರ್ಯಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಹಲವಾರು ಜನರು ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಪರಿಸರ ಉಳಿಸುವ ಈ ಕಾರ್ಯದಲ್ಲಿ ಸಹಭಾಗಿಯಾದ ಎಲ್ಲರಿಗೂ ಸಂಘದ ಅಧ್ಯಕ್ಷ ಮಹಮ್ಮದ್ ಅಶ್ರಫ್ ಧನ್ಯವಾದ ಸಲ್ಲಿಸಿದ್ದಾರೆ.