ಖಗೋಳಜೀವಶಾಸ್ತ್ರಜ್ಞರ ಪ್ರಕಾರ ನಮ್ಮ ಭೂಗ್ರಹವು ಜೀವಂತವಾಗಿದೆ ಮಾತ್ರವಲ್ಲದೆ ಅದು ತನ್ನದೇ ಆದ ಬುದ್ದಿಮತ್ತೆಯನ್ನು ಹೊಂದಿದೆ. ಯಾವುದೇ ಗ್ರಹದ ಸಾಮೂಹಿಕ ಜ್ಞಾನ ಮತ್ತು ಅರಿವಿನ ಸಾಮರ್ಥ್ಯಗಳನ್ನು ವಿವರಿಸುತ್ತಾ, ವಿಜ್ಞಾನಿಗಳು ಈ ಕಲ್ಪನೆಯನ್ನು “ಗ್ರಹಗಳ ಬುದ್ಧಿಮತ್ತೆ” ಎಂದು ಕರೆದಿದ್ದಾರೆ. ಈ ಲೇಖನವು ಇಂಟರ್ನ್ಯಾಷನಲ್ ಜರ್ನಲ್ ಆಫ್ ಆಸ್ಟ್ರೋಬಯಾಲಜಿಯಲ್ಲಿ ಪ್ರಕಟಿಸಲ್ಪಟ್ಟಿದೆ.
ರೋಚೆಸ್ಟರ್ ವಿಶ್ವವಿದ್ಯಾಲಯದ ಆಡಮ್ ಫ್ರಾಂಕ್, ಪ್ಲಾನೆಟರಿ ಸೈನ್ಸ್ ಇನ್ಸ್ಟಿಟ್ಯೂಟ್ ನ ಡೇವಿಡ್ ಗ್ರಿನ್‌ಸ್ಪೂನ್ ಮತ್ತು ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯ ಸಾರಾ ವಾಕರ್ ಎನ್ನುವ ಮೂವರು ವಿಜ್ಞಾನಿಗಳು ಇಂಟರ್ನ್ಯಾಷನಲ್ ಜರ್ನಲ್ ಆಫ್ ಆಸ್ಟ್ರೋಬಯಾಲಜಿಯಲ್ಲಿ ಒಂದು ಲೇಖನವನ್ನು ಬರೆದಿದ್ದಾರೆ. ಇದನ್ನು “ಗ್ರಹಗಳ ಪ್ರಮಾಣದ ಪ್ರಕ್ರಿಯೆಯಾಗಿ ಬುದ್ಧಿವಂತಿಕೆ” ಎಂದು ಹೆಸರಿಸಲಾಗಿದೆ. ಲೇಖನವು ಭೂಮಿಯ ಬಗ್ಗೆ ನಮ್ಮ ವೈಜ್ಞಾನಿಕ ತಿಳುವಳಿಕೆ ಜೊತೆಗೆ ಜೀವನವು ಹೇಗೆ ಬದಲಾಗಿದೆ ಮತ್ತು ಗ್ರಹವನ್ನು ಬದಲಾಯಿಸುವುದನ್ನು ಮುಂದುವರೆಸಿದೆ ಎನ್ನುವುದನ್ನು ಆಧರಿಸಿದ ಚಿಂತನೆಯ ಪ್ರಯೋಗವಾಗಿದೆ.
ಭೂಮಿಯ ಮೇಲಿನ ಶಿಲೀಂಧ್ರಗಳ ಭೂಗತ ಜಾಲಗಳು ನಿರಂತರವಾಗಿ ಸಂವಹನ ನಡೆಸುತ್ತಿವೆ ಎನ್ನುವುದನ್ನು ಸೂಚಿಸುವ ಸಾಕಷ್ಟು ಪುರಾವೆಗಳಿವೆ ಎನ್ನುವ ವಿಜ್ಞಾನಿಗಳು, ಇದು ಪ್ರಸ್ತುತ ಭೂಮಿಯ ಮೇಲೆ ಅದೃಶ್ಯ ಬುದ್ಧಿವಂತಿಕೆಯು ಅಸ್ತಿತ್ವದಲ್ಲಿದೆ ಎನ್ನುವುದನ್ನು ಸೂಚಿಸುತ್ತದೆ ಎನ್ನುತ್ತಾರೆ.
ರೋಚೆಸ್ಟರ್ ವಿಶ್ವವಿದ್ಯಾನಿಲಯದ ಪತ್ರಿಕೆಯ ಸಹ-ಲೇಖಕರಾದ ಆಡಮ್ ಫ್ರಾಂಕ್ ಅವರು “ಗ್ರಹದ ಹಿತದೃಷ್ಟಿಯಿಂದ ಒಂದು ಸಮುದಾಯವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ನಾವು ಇನ್ನೂ ಹೊಂದಿಲ್ಲ” ಎನ್ನುತ್ತಾರೆ. ಫ್ರಾಂಕ್ ಭೂಮಿಯ ಮೇಲಿನ ಮಾನವ ಚಟುವಟಿಕೆಗಳಾದ ಹವಾಮಾನ ಬದಲಾವಣೆ, ಮಾಲಿನ್ಯ ಅಥವಾ ಸಂಪನ್ಮೂಲ ಶೋಷಣೆಯನ್ನು ಉಲ್ಲೇಖಿಸುತ್ತಾ, ಅದು ಪ್ರಸ್ತುತ ಗ್ರಹದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಉಂಟುಮಾಡುತ್ತಿದೆ ಎಂದು ಹೇಳುತ್ತಾರೆ.
ಫ್ರಾಂಕ್ ಪ್ರಕಾರ, ಭೂಮಿಯ ಅಗೋಚರ ಮನಸ್ಸಿನ ಇಂತಹ ವಿಶ್ಲೇಷಣೆಗಳು ನಾವು ಭೂಗ್ರಹ ಮತ್ತು ಅದರ ಹೇರಳವಾದ ಸಂಪನ್ಮೂಲಗಳನ್ನು ಹೇಗೆ ಪರಿಗಣಿಸುತ್ತೇವೆ ಎಂಬುದರ ವಿಷಯದಲ್ಲಿ ಜವಾಬ್ದಾರರಾಗಲು ಸಹಾಯ ಮಾಡಬಹುದು. ಜೊತೆಗೆ, ಇದು ಮಾನವರಿಗೆ ಅನ್ಯಗ್ರಹ ಜೀವಿಗಳನ್ನು ಹುಡುಕಲು ಸಹಾಯ ಮಾಡಬಹುದು ಎಂದು ಅವರು ನಂಬುತ್ತಾರೆ.
ಇಂತಹ ಅಧ್ಯಯನಗಳು ಹವಾಮಾನ ಬದಲಾವಣೆ ಮತ್ತು ಜೀವನ ಮತ್ತು ಬುದ್ಧಿವಂತಿಕೆ ವಿಕಸನಗೊಳ್ಳುವ ಗ್ರಹಗಳ ಮೇಲಿನ ಜೀವನದ ಸಾಮರ್ಥ್ಯ ಮತ್ತು ಬದುಕಲು ಅಗತ್ಯವಾದ ಜ್ಞಾನವನ್ನು ಒಂದುಗೂಡಿಸಲು ಸಹಾಯ ಮಾಡುತ್ತದೆ ಎಂದು ವಿಜ್ಞಾನಿಗಳು ನಂಬುತ್ತಾರೆ.
ಗ್ರಹದ ಬುದ್ಧಿಮತ್ತೆಯನ್ನು ಹೇಗೆ ವ್ಯಾಖ್ಯಾನಿಸಬಹುದು ಮತ್ತು ಅರ್ಥಮಾಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳುವುದು ಈ ಗ್ರಹದಲ್ಲಿ ಮಾನವಕುಲದ ಭವಿಷ್ಯ ಅಥವಾ ಅದರ ಕೊರತೆಯ ಮೇಲೆ ಸ್ವಲ್ಪ ಬೆಳಕನ್ನು ಹಾಕಲು ಸಹಾಯ ಮಾಡುತ್ತದೆ. ನಾವು ಎಂದಾದರೂ ಒಂದು ಪ್ರಜಾತಿಯಾಗಿ ಜೀವಿಸಲು ಬಯಸಿದ್ದರೆ, ನಾವು ನಮ್ಮ ಬುದ್ಧಿವಂತಿಕೆಯನ್ನು ಗ್ರಹದ ಹೆಚ್ಚಿನ ಒಳಿತಿಗಾಗಿ ಬಳಸಬೇಕು ಎಂದು ಆಡಮ್ ಫ್ರಾಂಕ್ ಅಭಿಪ್ರಾಯಪಡುತ್ತಾರೆ.
ಮೂಲ ಲೇಖನ: ಸೈಟೆಕ್ ಡೈಲಿ