- ಉಡುಪಿ XPRESS ಟೆಕ್ ಲುಕ್
ಗೂಗಲ್ ಕಂಪೆನಿಯ ಬಹುನಿರೀಕ್ಷಿತ ಪಿಕ್ಸೆಲ್ 4 A ಫೋನ್ ಇದೀಗ ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು ಮೊಬೈಲ್ ಪ್ರಿಯರ ಕಣ್ಣು ಪಿಕ್ಸೆಲ್ ಫೋನ್ ಮೇಲೆ ನೆಟ್ಟಿದೆ. ಕೊರೋನಾ ಪೂರ್ವದಲ್ಲೇ ಈ ಫೋನ್ ಮಾರುಕಟ್ಟೆಗೆ ಲಗ್ಗೆ ಇಡಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿತ್ತು. ಆದರೆ ಲಾಕ್ ಡೌನ್ ಇತ್ಯಾದಿ ಕಾರಣಗಳಿಂದ ಮಾರುಕಟ್ಟೆಗೆ ಬರಲು ತಡವಾಗಿತ್ತು.ಆದರೆ ಇದೀಗ ಗೂಗಲ್ ತನ್ನ ಪೇಜ್ ನ ಟೀಸರ್ ನಲ್ಲಿ ಆ.3 ಕ್ಕೆ ಪಿಕ್ಸೆಲ್ ಫೊನ್ ಬಿಡುಗಡೆಯಾಗಲಿದೆ ಎನ್ನುವ ಸುಳಿವು ಬಿಟ್ಟುಕೊಟ್ಟಿದೆ.
ಈ ಹೊಸ ಮಾಡೆಲ್ ನ ಫೋನ್ ಕ್ಯಾಮರಾ ಪ್ರೀಯರಿಗೆ ಇಷ್ಟವಾಗುದರಲ್ಲಿ ಅನುಮಾನವೇ ಇಲ್ಲ.ಲೋ ಲೈಟ್ ನಲ್ಲಿಯೂ ಅತ್ಯಂತ ನಿಖರವಾದ ಫೋಟೋಗ್ರಫಿ ಮಾಡಲು ಈ ಮೊಬೈಲ್ ನ ಕ್ಯಾಮರಾ ಅನುಕೂಲಕರವಾಗಿದೆ.ಕ್ಯಾಮರಾ ಯಾವುದೇ ಕಾರಣಕ್ಕೂ ಗ್ರಾಹಕರನ್ನು ನಿರಾಶೆಗೊಳಿಸಲು ಸಾಧ್ಯವಿಲ್ಲ ಎಂದು ಗೂಗಲ್ ಹೇಳಿಕೊಂಡಿದೆ.
ಏನೇನಿದೆ ಈ ಸೆಟ್ ನಲ್ಲಿ?
ಗೂಗಲ್, ಕ್ಯಾಮರಾ ಬಗ್ಗೆ ಮಾತ್ರ ಒಂದಷ್ಟು ಮಾಹಿತಿ ನೀಡಿದ್ದು ಉಳಿದಂತೆ ಈ ಮೊಬೈಲ್ ನಲ್ಲಿ ಏನೇನಿರಲಿದೆ ಎನ್ನುವ ಸತ್ಯವನ್ನು ಎಲ್ಲೂ ಬಿಟ್ಟು ಕೊಟ್ಟಿಲ್ಲವಾದರೂ ಒಂದಷ್ಟು ಮಾಹಿತಿಗಳು ಜಾಲತಾಣದಲ್ಲಿ ಸೋರಿಕೆಯಾಗಿದೆ.ಅದರಂತೆ ಈ ಮೊಬೈಲ್ 5.8 ಡಿಸ್ಲೇ ಹೊಂದಿದ್ದು 12.2 ಮೆಗಾಫಿಕ್ಸೆಲ್ ಕ್ಯಾಮರಾ 6 GB ಜ ರ್ಯಾಮ್ ಹೊಂದಿದೆ ಎನ್ನಲಾಗಿದೆ.ಉಳಿದಂತೆ ಗೂಗಲ್ ನ ಒರಿಜಿನಲ್ ಸಾಫ್ಟ್ ವೇರ್ ಗಳು ಇಲ್ಲಿ ಸಿಗಲಿದೆ ಎನ್ನಲಾಗಿದೆ. ಮೊಬೈಲ್ ಕೂಡ ಹಾಟ ಲುಕ್ ಹೊಂದಿದೆ ಎನ್ನಲಾಗಿದೆ. ಅಂದುಕೊಂಡರೆ ಎಲ್ಲವೂ ಆದರೆ ಆಗಸ್ಟ್ ನಂತರ ಈ ಮೊಬೈಲ್ ಗ್ರಾಹಕರಿಗೆ ಸಿಗಲಿದೆ.