ಹೊರಗೆ ಜಿಟಿ ಜಿಟಿ ಮಳೆ ಬೀಳೋವಾಗ ಈ ಪೋಹಾ ಮಿಕ್ಚರ್ ಮಾಡಿ ಚಪ್ಪರಿಸಿ ತಿನ್ನೋ ಸುಖವೇ ಬೇರೆ. ಸಿಂಪಲ್ಲಾಗ್ ಮಾಡಿ ಟೇಸ್ಟಿಯಾಗಿ ತಿನ್ನಬಹುದು.
ಆಗಾಗ ಪಾಕಲೋಕದಲ್ಲಿ ವಿಭಿನ್ನ ಪ್ರಯೋಗ ಮಾಡುವ ಕಾರ್ಕಳದ ಡಾ.ಹರ್ಷಾ ಕಾಮತ್ ಪೋವಾ ಮಿಕ್ಚರ್ ಮಾಡುವ ವಿಧಾನವನ್ನು ಉಡುಪಿ X ಪ್ರೆಸ್ ನ “ಸವಿಯೋಣ ಬಾರಾ”ವಿಭಾಗದಲ್ಲಿ ಹೇಳಿಕೊಟ್ಟಿದ್ದಾರೆ.
ಏನೇನ್ ಬೇಕು?
ದಪ್ಪ ಅವಲಕ್ಕಿ ಎರಡು ಕಪ್, ನೆಲಕಡ್ಲೆ 1/4 ಕಪ್
ರುಚಿಗೆ ತಕ್ಕಷ್ಟು ಉಪ್ಪು, ಹಳದಿ, ಅಚ್ಚಕಾರದ ಪುಡಿ, ಸಾಂಬಾರು ಹುಡಿ ,ಸಕ್ಕರೆ ಪುಡಿ ಕರಿಬೇವು
ಮಾಡೋದೇಗೆ?
ಮೊದಲಿಗೆ ದಪ್ಪ ಅವಲಕ್ಕಿ , ನೆಲಕಡಲೆ ಹಾಗು ಕರಿಬೇವನ್ನು ಎಣ್ಣೆಯಲ್ಲಿ ಕರಿಯಿರಿ. ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು , ಹಲದಿ, ಖಾರದಪುಡಿ, ಸಾಂಬಾರ್ ಪುಡಿ , ಸಕ್ಕರೆ ಪುಡಿ ಬೆರೆಸಿರಿ. ರುಚಿಯಾದ ಪೋಹಾ ಮಿಕ್ಸ್ಚರ್ ರೆಡಿ
-ಡಾ.ಹರ್ಷಾ ಕಾಮತ್,ಕಾರ್ಕಳ