ಪ್ರೀತಮ್ ಗೋಪಾಲಕೃಷ್ಣ ಅಡಿಗ ಅವರಿಗೆ ಪಿಎಚ್ ಡಿ ಪದವಿ

ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹಯರ್ ಎಜುಕೇಶನ್ (ಮಾಹೆ), ಮಣಿಪಾಲ ಸಂಸ್ಥೆಯು ಪ್ರೀತಮ್ ಗೋಪಾಲಕೃಷ್ಣ ಅಡಿಗ ಅವರಿಗೆ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದೆ.

ಅವರು ನಡೆಸಿದ ಪಿಎಚ್‌.ಡಿ. ಸಂಶೋಧನೆ “Memes, Millennials and Media: A Thematic Exploration of Video Internet Memes and their Relevance in the Indian Digital Space” ಎಂಬ ಶೀರ್ಷಿಕೆಯಲ್ಲಿ, ಭಾರತದ ಡಿಜಿಟಲ್ ಪ್ರಾಂಗಣದಲ್ಲಿ ವೀಡಿಯೋ ಮೀಮ್‌ಗಳ ಸಾಮಾಜಿಕ, ಸಾಂಸ್ಕೃತಿಕ ಮತ್ತು ಭಾಗವಹಿಸುವಿಯ ಮಹತ್ವವನ್ನು ಸಮಗ್ರವಾಗಿ ವಿಶ್ಲೇಷಿಸುತ್ತದೆ.

ಈ ಅಧ್ಯಯನವು ಭಾರತೀಯ ಯುವಜನರು ಇನ್‌ಸ್ಟಾಗ್ರಾಂ ರೀಲ್ಸ್‌ ಮೀಮ್‌ಗಳ ಮೂಲಕ ತಮ್ಮ ಭಾವನೆ, ಗುರುತು, ಸಾಂಸ್ಕೃತಿಕ ಅರಿವು, ಮತ್ತು ಸ್ವೀಕಾರಾರ್ಹ ಹಾಸ್ಯ ಹಾಗೂ ದ್ವೇಷ ಭಾಷಣ ನಡುವಿನ ಸೂಕ್ಷ್ಮ ಗಡಿಯನ್ನು ದೈನಂದಿನ ಜೀವನ ಹಾಗೂ ಸ್ಥಳೀಯ ಸೃಜನಶೀಲತೆ ಬಳಸಿ ಹೇಗೆ ಸಂವಹನಗೊಳಿಸುತ್ತಾರೆ ಎಂಬುದನ್ನು ತೋರಿಸುತ್ತದೆ.

ಈ ಸಂಶೋಧನೆ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್‌ನ ಪ್ರಾಧ್ಯಾಪಕ ಮತ್ತು ಕಮ್ಯುನಿಕೇಷನ್ ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥ ಡಾ. ಪದ್ಮಕುಮಾರ್ ಕೆ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಂಡಿದೆ.

ಪ್ರೀತಮ್ ಅಡಿಗ, ಬ್ರಹ್ಮಾವರದ ಚೇರ್ಕಾಡಿ ಗ್ರಾಮದ ನಿವಾಸಿಯಾಗಿದ್ದು, ದಿವಂಗತ ಗೋಪಾಲಕೃಷ್ಣ ಅಡಿಗ ಹಾಗು ಉಷಾ ಅಡಿಗ ಅವರ ಪುತ್ರರಾಗಿದ್ದು, ಮಣಿಪಾಲದ Adsyndicate ಕಂಪನಿಯಲ್ಲಿ ಮಾರ್ಕೆಟಿಂಗ್ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.