ಶ್ರೀಮತಿ ನಿಶಾ ರೀನಾ ನಜರತ್ ಅವರಿಗೆ ಪಿ ಎಚ್ ಡಿ ಪದವಿ ಪ್ರಧಾನ

ಉಡುಪಿ: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಿತ ಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಶ್ರೀಮತಿ ನಿಶಾ ರೀನಾ ನಜರತ್ ಇವರು ಸಂಸ್ಥೆಯ ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಲೊಲಿಟ ಪ್ರಿಯಾ ಕ್ಯಾಸ್ತಲಿನೋ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ ಎ ಸ್ಟಡಿ ಆನ್ ಕಂಪ್ಲೀಟ್ ಕಲರಿಂಗ್ಸ್ ಅಂಡ್ ಸೆಟ್ ಕಲರಿಂಗ್ಸ್ ಆಫ್ ಡೈಗ್ರಾಫ್ಸ್” ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು
ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಶ್ರೀಮತಿ ನಿಶಾ ರೀನಾ ನಜರತ್ ಇವರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಡಾ. ರಾಧಾಕೃಷ್ಣ ಎಸ್ ಐತಾಳ್, ಸಂಸ್ಥೆಯ ಪ್ರಾಂಶುಪಾಲರಾದ ಡಾ.ತಿರುಮಲೇಶ್ವರ ಭಟ್ ಮತ್ತು ಸಂಸ್ಥೆಯ ಬೋಧಕ-‌ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.