ಉಡುಪಿ: ಗಿರಿಜಾ ಹೆಲ್ತ್ ಕೇರ್ ಎಂಡ್ ಸರ್ಜಿಕಲ್ಸ್ ನಲ್ಲಿ ಗಿರಿಜಾಗ್ರೂಪ್ ಆಫ್ ಕನ್ ಸರ್ನ್ಸ್ ವತಿಯಿಂದ ಉಡುಪಿಯ ಸೀನಿಯರ್ ಜೇಸಿ ಟೆಂಪಲ್ ಸಿಟಿ ಲೀಜನ್ ಸಹಕಾರದೊಂದಿಗೆ ಸೆ.26 ರಂದು ಉಡುಪಿ ಭಾಗದ ಕೆಲ ಹಿರಿಯ ಫಾರ್ಮಸಿಸ್ಟ್ ಗಳನ್ನು ವೈದ್ಯಕೀಯ ಕ್ಷೇತ್ರದಲ್ಲಿನ ಅವರ ನಿಸ್ವಾರ್ಥ ಮತ್ತು ಜವಾಬ್ದಾರಿಯುತ ಸೇವೆಗಾಗಿ ಗುರುತಿಸಿ ಗೌರವಿಸಲಾಯಿತು.
ಉಡುಪಿ ಜಿಲ್ಲಾ ಸಹಾಯಕ ಔಷಧ ನಿಯಂತ್ರಕ ಶಂಕರ್ ನಾಯ್ಕ್ ಅತಿಥಿಯಾಗಿ ಪಾಲ್ಗೊಂಡು ಫಾರ್ಮಸಿಸ್ಟ್ ಗಳ ಪ್ರಾಮುಖ್ಯತೆ, ಅವರ ಜವಾಬ್ದಾರಿ, ಅವಿರತ ಸೇವೆಯ ಬಗ್ಗೆ ಮಾತನಾಡಿ, ಗಿರಿಜಾ ಸಂಸ್ಥೆಯು ಆರೋಗ್ಯ ಕ್ಷೇತ್ರದಲ್ಲಿ ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದರು.
ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಂಕರ್ ನಾಯ್ಕ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನಿತರಾದ ಹಿರಿಯ ಫಾರ್ಮಸಿಸ್ಟ್ ಗಳು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ತಮ್ಮ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿರುವ ಮೊದಲ ಸಂಸ್ಥೆ ಗಿರಿಜಾ ಹೆಲ್ತ್ ಕೇರ್ ಎಂದು ಭಾವುಕರಾಗಿ ನುಡಿದರು.
ನಗರ ಸಭಾ ಸದಸ್ಯೆ ಮಾನಸ ಪೈ, ಸಂಸ್ಥೆಯ ಪಾಲುದಾರರಾದ ರವೀಂದ್ರ ಕೆ. ಶೆಟ್ಟಿ, ಹರೀಶ್ ಕುಮಾರ್, ಸುರೇಖಾ ರವೀಂದ್ರ ಶೆಟ್ಟಿ ಉಡುಪಿ ಟೆಂಪಲ್ ಸಿಟಿ ಲೀಜನ್ ನ ಅಧ್ಯಕ್ಷ ಜಗದೀಶ್ ಕೆಮ್ಮಣ್ಣು, ನಿಕಟ ಪೂರ್ವ ಅಧ್ಯಕ್ಷ ವಿಜಯ ಕುಮಾರ್ ಉದ್ಯಾವರ, ಕಾರ್ಯದರ್ಶಿ ಸಂತೋಷ್ ಕುಮಾರ್ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.