ಮಧ್ಯಪ್ರಾಚ್ಯದ ಯುದ್ಧ ದೇಶದ ಮೇಲೆ ಭಾರೀ ಎಫೆಕ್ಟ್ ಆಗುತ್ತಿದೆ. ವಿಧಾನಸಭಾ ಚುನಾವಣೆಯ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ತೀವ್ರವಾಗಿ ಏರಬಹುದು ಎಂಬ ಎಚ್ಚರಿಕೆ ಹೊರಬಿದ್ದಿದೆ. ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಭಾರತದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ತೀವ್ರವಾಗಿ ಏರಬಹುದು ಎಂಬ ಎಚ್ಚರಿಕೆ ಹೊರಬಿದ್ದಿದೆ. ಕಚ್ಚಾ ತೈಲದ ಜಾಗತಿಕ ಬೆಲೆಗಳು ಹೆಚ್ಚುತ್ತಿರುವುದರಿಂದ ಭಾರತದಲ್ಲಿ ತೈಲ ಸಂಸ್ಕರಣಾಗಾರಗಳ ಮೇಲೆ ದೊಡ್ಡ ಒತ್ತಡ ನಿರ್ಮಾಣವಾಗಿದೆ. ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯ ಬಗ್ಗೆ ಭವಿಷ್ಯ ನುಡಿದಿದೆ.
ಈ ಏರಿಕೆಗೆ ಮುಖ್ಯ ಕಾರಣ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಪೂರೈಕೆ ಬಿಗಿಯಾಗಿರುವುದೇ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಸುತ್ತಲಿನ ಅಡೆತಡೆಗಳು ತೈಲ ಸಾಗಣೆಗೆ ತೊಂದರೆ ಉಂಟುಮಾಡಿವೆ. ಕೆಲಕಾಲ ಇರಾನ್ ಕದನ ವಿರಾಮದ ವೇಳೆಯಲ್ಲಿ ಸಾಗಣೆಗೆ ಸಡಿಲಿಕೆ ನೀಡಿದ್ದರೂ, ನಂತರ ಮತ್ತೆ ಉದ್ವಿಗ್ನತೆ ಹೆಚ್ಚಾಗಿದ್ದು ಕಚ್ಚಾ ತೈಲದ ಭೌತಿಕ ಪೂರೈಕೆಯನ್ನು ಕಡಿಮೆ ಮಾಡಿದೆ. ಇದರ ಪರಿಣಾಮವಾಗಿ ಫ್ಯೂಚರ್ಸ್ ಮಾರುಕಟ್ಟೆ ಮತ್ತು ಭೌತಿಕ ಮಾರುಕಟ್ಟೆ ಬೆಲೆಗಳ ನಡುವಿನ ಅಂತರವೂ ಹೆಚ್ಚಾಗಿದೆ. ಇದು ತೈಲ ಪೂರೈಕೆಯ ಮೇಲೆ ನಿರಂತರ ಒತ್ತಡವಿದ್ದು, ತಾತ್ಕಾಲಿಕವಾಗಿ ಬೆಲೆ ಇಳಿಕೆ ಸಾಧ್ಯತೆ ಕಡಿಮೆ ಎಂಬುದನ್ನು ಸೂಚಿಸುತ್ತದೆ.

















