ಉಡುಪಿ: ಬಹುಕೋಟಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಚೈತ್ರಾ ಜೊತೆ ಕುಂದಾಪುರದ ಹೆಸರನ್ನು ಬಳಸದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕು ಎಂದು ಕೋರಿ ಕುಂದಾಪುರ ಮೂಲದ ಆದರೆ ಬೆಂಗಳೂರಿನ ಹನುಮಂತ ನಗರದಲ್ಲಿ ವಾಸವಾಗಿರುವ ಉದ್ಯಮಿ ಗಣೇಶ್ ಶೆಟ್ಟಿ ನಗರ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ.
ಉಡುಪಿ ಜಿಲ್ಲೆಯ ಪ್ರಮುಖ ಪಟ್ಟಣವಾದ ಕುಂದಾಪುರವು 10-11 ಶತಮಾನದ ಆಲುಪ ರಾಜ ಕುಂದವರ್ಮನ ಆಳ್ವಿಕೆಯಲ್ಲಿದ್ದು. ಇತಿಹಾಸ ಪ್ರಸಿದ್ದ ಕುಂದೇಶ್ವರ ದೇವಸ್ಥಾನ ನಿರ್ಮಿಸಿದ ಖ್ಯಾತಿ ಇದೆ. ಅಲ್ಲದೆ ನಗರದ ಬೆಳವಣಿಗೆಯಲ್ಲಿ ಕದಂಬ, ಚಾಲುಕ್ಯ, ಹೊಯ್ಸಳ, ವಿಜಯನಗರ ಅರಸರ ಕೊಡುಗೆ ಮಹತ್ತರವಾಗಿದೆ. ಅನೇಕ ಪ್ರಸಿದ್ದ ದೇವಸ್ಥಾನಗಳಿಂದ ಕುಂದಾಪುರ ಎಂಬ ಊರು ಪ್ರಸಿದ್ದಿ ಹೊಂದಿದ್ದು, ಈ ಹೆಸರನ್ನು ಬಳಸದಂತೆ ನಿರ್ಬಂಧ ಹೇರಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ ಎಂದು ವರದಿಯಾಗಿದೆ.
ಅರ್ಜಿಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.












