ಉಡುಪಿ: ಆಕಸ್ಮಿಕವಾಗಿ ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

ಉಡುಪಿ: ಉಡುಪಿ ಶ್ರೀಕೃಷ್ಣ ಮಠಕ್ಕೆ ಬಂದಿದ್ದ ಭಕ್ತರೊಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದ ಘಟನೆ ವರದಿಯಾಗಿದೆ. ಬಾಗಲಕೋಟೆ ಮೂಲದ ಸಂತೋಷ್ ಎಂಬ ವ್ಯಕ್ತಿ ಬಾವಿಗೆ ಬಿದ್ದವರು.

ಗುರುವಾರ ಸಾಯಂಕಾಲ ಶೀರಿಬೀಡು ಆವರಣದಲ್ಲಿರುವ ಬಾವಿಕಟ್ಟೆ ಮೇಲೆ ಕುಳಿತಿದ್ದ ಸಂತೋಷ್ ಆಯತಪ್ಪಿ ಬಾವಿಗೆ ಬಿದ್ದಿದ್ದಾರೆ.

ಬಾವಿಯಲ್ಲಿ ಮುಳುಗುವಷ್ಟು ನೀರಿಲ್ಲದಿದ್ದ ಕಾರಣ ಸಂತೋಷ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾವಿಗೆ ಬಿದ್ದ ಸಂತೋಷ್‌ನ ರಕ್ಷಣೆಗೆ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಧಾವಿಸಿದ್ದಾರೆ. ಬಳಿಕ ಬಾವಿಗೆ ಹಗ್ಗ ಇಳಿ ಬಿಟ್ಟು ಸ್ಥಳೀಯರ ಸಹಾಯದಿಂದ ಮೇಲಕ್ಕೆತ್ತಿದ್ದಾರೆ. ಬಾವಿಗೆ ರಭಸವಾಗಿ ಬಿದ್ದ ಪರಿಣಾಮ ಸಂತೋಷ್‌ ಗಾಯಗೊಂಡಿದ್ದು, ಕೂಡಲೇ ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ರವಾನಿಸಲಾಯಿತು ಎಂದು ವರದಿ ಹೇಳಿದೆ.