ಮಾ.16 ರಿಂದ ಎ.2 ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ

ಉಡುಪಿ : ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನ ಬ್ರಹ್ಮಕಲಶೋತ್ಸವವು ಮಾ. 16ರಂದು ಮೊದಲ್ಗೊಂಡು ಎ. 2ರವರೆಗೆ ನಡೆಯಲಿರುವುದು. ಉಡುಪಿ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ, ಬ್ರಹ್ಮಶ್ರೀ ವೇದಮೂರ್ತಿ ಪುತ್ತೂರು ಮಧುಸೂದನ ತಂತ್ರಿಯವರ ನೇತೃತ್ವದಲ್ಲಿ ಮತ್ತು ಪಾಡಿಗಾರು ಶ್ರೀನಿವಾಸ ತಂತ್ರಿ ಹಾಗೂ ವೈದಿಕರ ಸಹಯೋಗದಲ್ಲಿ ಶ್ರೀ ಮಹಾಗಣಪತಿ ಶ್ರೀ ಮಹಾಲಿಂಗೇಶ್ವರ ದೇವರ ನೂತನ ದೇವಾಲಯ ಸಮರ್ಪಣಾಪೂರ್ವಕ, ಪುನಃಪ್ರತಿಷ್ಠಾಪೂರ್ವಕ ಸಹಸ್ರ ಕಲಶ ಸಹಿತ ಬ್ರಹ್ಮಕುಂಭಾಭಿಷೇಕ ನವೀಕೃತ ಶ್ರೀ ಪೇಜಾವರ ಶಾಖಮಠದದ ಸಮರ್ಪಣೆ ನಾಗಮಂಡಲ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವವು ಜರುಗಲಿರುವುದು.

ಧಾರ್ಮಿಕ ಕಾರ್ಯಕ್ರಮಗಳು

ಮಾ.16 ಸಂಜೆ 4 ರಿಂದ ಋತ್ವಿಜರ ಸ್ವಾಗತ, ಆಲಯ ಪರಿಗ್ರಹ, ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪುಣ್ಯಾಹ ವಾಚನ, ಭೂಶುದ್ದಿ ಹೋಮ, ಸಪ್ತಶುದ್ದಿ, ರಾತ್ರಿಪೂಜೆ, ಪೇಜಾವರ ಶಾಖಾಮಠದಲ್ಲಿ ಸಪ್ತಶುದ್ದಿ, ಸುದರ್ಶನ ಹೋಮ, ವಾಸ್ತುಪೂಜೆ, ವಾಸ್ತು ಬಲಿ, ವಾಸ್ತು ಹೋಮ, ಭೂವರಾಹ ಹೋಮ, ಪ್ರಾಕಾರ ಬಲಿ.

ಮಾ.17 ಪುಣ್ಯಾಹ ವಾಚನ, ಗಣಯಾಗ, ನವಗ್ರಹ ಯಾಗ, ವಿರಜಾ ಹೋಮ, ರಾಮ ದೇವರ ಪ್ರತಿಷ್ಠೆ, ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ

ಮಧ್ಯಾಹ್ನ 2.30 ರಿಂದ ಭವ್ಯ ಮೆರವಣಿಗೆಯೊಂದಿಗೆ ಹಸಿರು ಹೊರೆಕಾಣಿಕೆ ಸಮರ್ಪಣೆ, ಸಂಜೆ 5 ರಿಂದ ಅಂಕುರಾರೋಪಣ, ಪ್ರಾಸಾದ ಶುದ್ದಿ, ರಾಕ್ಷೋಘ್ನ ಹೋಮ, ರಾತ್ರಿ ಪೂಜೆ

ಮಾ.18 ಪುಣ್ಯಾಹವಾಚನ, ಅರಣಿ ಮಥನ, ಗಣಯಾಗ, ಮಹಾಪೂಜೆ, ಅನ್ನಸಂತರ್ಪಣೆ ಸಂಜೆ 5 ರಿಂದ ವಾಸ್ತುಬಲಿ, ವಾಸ್ತು ಹೋಮ, ಪ್ರಾಕಾರ ಬಲಿ, ರಾತ್ರಿ ಪೂಜೆ.

ಮಾ.19,20,22 ಪುಣ್ಯಾಹವಾಚನ, ಗಣಯಾಗ, ಗಣಹೋಮಾದಿ ವಿವಿಧ ಪ್ರಕಾರದ ಪೂಜೆಗಳು ಬೆಳಗ್ಗೆಯಿಂದಲೇ ಆರಂಭಗೊಳ್ಳಲಿವೆ.

ಮಾ.22 ಬೆಳಿಗ್ಗೆ 9.50 ರಿಂದ ಮಹಾಗಣಪತಿ ದೇವರ ಜೀವಕುಂಭಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣಾದಿ ಸಂಜೆ ದುರ್ಗಾನಮಸ್ಕಾರ ಪೂಜೆ, ಅಸ್ತ್ರಮಂತ್ರ ಹೋಮಾದಿಗಳು ನಡೆಯಲಿವೆ.

ಸಾಂಸ್ಕೃತಿಕ ಕಾರ್ಯಕ್ರಮಗಳು

ಮಾ. 17ರಂದು ಹೊರೆಕಾಣಿಕೆಯ ಭವ್ಯ ಮೆರವಣಿಗೆ, ಸಂಜೆ ಧಾರ್ಮಿಕ ಸಭೆ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾದೂಗಾರ್‌ ಕಾರ್ಕಳ ಯೋಗೀಶ್‌ ಆಚಾರ್ಯ ಮಸ್ತ್‌ ಮಜಾ ಮ್ಯಾಜಿಕ್‌, ಮಾ. 18ರಂದು ಪೆರ್ಣಂಕಿಲ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಊರ ಮಕ್ಕಳಿಂದ ವೈವಿಧ್ಯಮಯ ನೃತ್ಯ ಸಂಗೀತ ಕಾರ್ಯಕ್ರಮ, ಮಾ. 19ರಂದು ಅರೆಹೊಳೆ ಪ್ರತಿಷ್ಠಾನ ನಂದಗೋಕುಲ ಕಲಾವಿದರು ಮಂಗಳೂರು ಇವರಿಂದ ನೃತ್ಯಸಿಂಚನ, ಮಾ. 20ರಂದು ಶ್ರೀಮಹಾಗಣಪತಿ ಶ್ರೀ ಮಹಾಲಿಂಗೇಶ್ವರ ಮಹಿಳಾ ಯಕ್ಷಬಳಗ, ಪೆರ್ಣಂಕಿಲ ತಂಡದ ಸದಸ್ಯರಿಂದ ಯಕ್ಷಗಾನ, ಮಾ. 21ರಂದು ಬೆಳ್ಮಣ್‌ ಸಿದ್ಧಾರ್ಥ ಬಳಗದವರಿಂದ ಹಿಂದುಸ್ಥಾನಿ ಗಾಯನ, ಮಾ.22ರಂದು ಕಾವ್ಯಶ್ರೀ ಅಜೇರು ಮತ್ತು ಬಳಗದಿಂದ ಯಕ್ಷ-ಗಾನ-ವೈಭವ, ಮಾ. 23ರಂದು ಭಕ್ತಿ-ಗಾನ-ಸಿಂಚನ ಖ್ಯಾತ ಹಿನ್ನಲೆ ಸಂಗೀತ ವಾದಕರಾದ ವೀಕ್ಷಿತ್‌ ಕೊಡಂಚ ಬಳಗದವರಿಂದ, ಮಂಗಳೂರು ಸನಾತನ ಯಕ್ಷಾಲಯ ಕಲಾವಿದರಿಂದ ಗಜೇಂದ್ರ ಮೋಕ್ಷ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ನಡೆಯಲಿರುವುದು.

ಮಾ. 24ರಂದು ಸಂಗೀತ ವಿದ್ವಾನ್‌ ವಿದ್ಯಾಭೂಷಣ ಮತ್ತು ಬಳಗ ಇವರಿಂದ ಭಕ್ತಿರಸಮಂಜರಿ, ಮಾ.25 ರಂದು ಪದ್ಮಶ್ರೀ ಪುರಸ್ಕೃತ ವಿಶ್ವವಿಖ್ಯಾತ ಡ್ರಮ್ಸ್‌ ವಾದಕ ಆನಂದನ್‌ ಶಿವಮಣಿ, ಮ್ಯಾಂಡೋಲಿನ್‌ ವಾದಕ ಯು. ರಾಜೇಶ್‌ ಚೆನ್ನೈ ಇವರ ತಂಡದಿಂದ ಸಂಗೀತ ಜುಗಲ್‌ ಬಂಧಿ, ಮಾ.26 ರಂದು ಮಾಜಿಕ್‌ ಸ್ಟಾರ್‌ ಕುದ್ರೋಳಿ ಗಣೇಶ್‌ ಬಳಗದವರಿಂದ ವಿಸ್ಮಯ ಜಾದೂ, ಮಾ.27ರಂದು ಬೆಳಿಗ್ಗೆ 10.30ಕ್ಕೆ ವಿದುಷಿ ಗಾರ್ಗಿ ಎನ್‌. ಶಬ್ರಾಯ ತಂಡದವರಿಂದ ಸಂಗೀತ ಕಾರ್ಯಕ್ರಮ, ರಾತ್ರಿ ಉಡುಪಿ ಸೃಷ್ಟಿ ನೃತ್ಯ ಕಲಾ ಕುಟೀರ ವಿದುಷಿ ಮಂಜರಿ ತಂಡದವರಿಂದ ಭರತನಾಟ್ಯ ಮತ್ತು ನೃತ್ಯರೂಪಕ, ಮಾ. 28ರಂದು ಜಗದೀಶ್‌ ಪುತ್ತೂರು ಬಳಗದವರಿಂದ ಭಕ್ತಿ ರಸಮಂಜರಿ, ಮಾ. 29ರಂದು ದೇವದಾಸ ಕಾಪಿಕಾಡ್‌ ತಂಡದಿಂದ ಪುದರ್‌ ದೀದಾಂಡ್‌ ತುಳು ಹಾಸ್ಯಮಯ ನಾಟಕ, ಮಾ. 30ರಂದು ಲಕ್ಷ್ಮೀಗುರುರಾಜ್‌ ತಂಡದವರಿಂದ ನೃತ್ಯ ನೀರಾಜನಂ ನೃತ್ಯ ವೈವಿಧ್ಯ ಕಾರ್ಯಕ್ರಮ, ಮಾ. 31ರಂದು ವಿದುಷಿ ಮಾಧವಿ ಎಸ್.‌ ಭಟ್‌ ಪೆರ್ಣಂಕಿಲ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮವು ನಡೆಯಲಿರುವುದು. ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇಗುಲದ ಆಡಳಿತ ಮಂಡಳಿಯು ತಿಳಿಸಿದೆ.