ಉಡುಪಿ: ಜನತೆಯ ಪರವಾಗಿ ಸಾರ್ವಜನಿಕರಿಗೆ ಅತೀ ಹತ್ತಿರ ತಾಲೂಕು ಮಟ್ಟದ ನ್ಯಾಲಯ ಅತೀ ಅಗತ್ಯವೆಂದು ಪರಿಗಣಿಸಿ ಬೈಂದೂರು, ಬ್ರಹ್ಮಾವರ ಹಾಗೂ ಮುಂದೆ ಕಾಪು ನ್ಯಾಯಾಲಯ ಉದ್ಘಾಟನೆಯಾಗುವ ಸಾಧ್ಯತೆ ಇದೆ ಎಂದು ಹಿರಿಯ ನ್ಯಾಯವಾದಿ ಮತ್ತು ನೋಟರಿ ಶಿರಿಯಾರ ಕಲ್ಮರ್ಗಿ ಪ್ರಭಾಕರ್ ನಾಯಕ್ ತಿಳಿಸಿದ್ದಾರೆ.
ಗ್ರಾಮಾಭಿವೃದ್ಧಿ, ದೇಶ ಪ್ರಗತಿ ಹೊಂದಲು ನ್ಯಾಯಾಲಯವು ಜನರ ಬಳಿಗೆ ತಲುಪುವುದು ಅತೀ ಅಗತ್ಯ ಎಂದು ಮನಗೊಂಡು ಭಾರತ ಸರ್ಕಾರವು ನ್ಯಾಯಾಂಗ ವ್ಯವಸ್ಥೆಯನ್ನು ಸರಿಪಡಿಸುವುದು ಸೂಕ್ತ ಕ್ರಮ ಎಂದು ಭಾವಿಸಿದೆ.
ಉಡುಪಿ ಜಿಲ್ಲೆಯಲ್ಲಿ ಬೈಂದೂರು, ಕುಂದಾಪುರ, ಬ್ರಹ್ಮಾವರ, ಕಾರ್ಕಳ, ಕಾಪು ತಾಲೂಕು ಕಂದಾಯ ಕ್ಷೇತ್ರ ಒಳಗೊಂಡ ಜಿಲ್ಲಾ ನ್ಯಾಯಾಲಯ ವ್ಯಾಪ್ತಿಯಾಗಿದೆ. ಪ್ರಾರಂಭಿಕ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಹಾಗೂ ಜೆ.ಎಮ್.ಎಫ್.ಸಿ. ಇದೆ. ವಾರದ 2 ದಿನ ಸೋಮವಾರ ಹಾಗೂ ಮಂಗಳವಾರ ಸಂಚಾರಿ ಪೀಠ ಕಾರ್ಯ ನಿರ್ವಹಿಸಲಿದೆ. ಎಲ್ಲ ಸಿವಿಲ್, ಕ್ರಿಮಿನಲ್ ಪ್ರಕರಣಗಳು ಬ್ರಹ್ಮಾವರ ತಾಲೂಕಿನ 52 ಗ್ರಾಮಗಳು ಅದರಲ್ಲಿ 33 ಗಾಮಗಳು ಕುಂದಾಪುರ ನ್ಯಾಯಾಲಯಗಳಿದ್ದು ಈಗ ಬ್ರಹ್ಮಾವರ ನ್ಯಾಯಾಲಯಕ್ಕೆ ವರ್ಗಾವಣೆ ಆಗಲಿದೆ ಹಾಗೂ 19 ಗ್ರಾಮಗಳು ಉಡುಪಿ ನ್ಯಾಯಲಯಗಳಲ್ಲಿ ಕಾರ್ಯನಿರ್ವಹಿಸುತ್ತದೆ.
ಜುಲೈ 4 ರಂದು ಗೌರವಾನ್ವಿತ ಜ. ಎಂ. ಐ. ಅರುಣ್, ನ್ಯಾಯಮೂರ್ತಿಗಳು ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿಗಳು ಉಡುಪಿ ಜಿಲ್ಲೆ ಇವರಿಗೆ ಬ್ರಹ್ಮಾವರದಲ್ಲಿ ಖಾಯಂ ನ್ಯಾಯಾಲಯ ಸ್ಥಾಪಿಸುವ ಬಗ್ಗೆ ಮನವಿ ಸಲ್ಲಿಸಲಾಗಿದೆ. ಅಂಕಿ ಅಂಶಗಳ ಪ್ರಕಾರ ಸುಮಾರು 3250 ಪ್ರಕರಣಗಳು ಬ್ರಹ್ಮಾವರ ನ್ಯಾಯಾಲಯಕ್ಕೆ ವರ್ಗಾವಣೆ ಆಗಲಿದೆ. ಇನ್ನು ಮುಂದೆ ಬ್ರಹ್ಮಾವರ ಖಾಯಂ ನ್ಯಾಯಾಲಯ ಆಗುವ ಬಗ್ಗೆ ರಾಜ್ಯ ಸರ್ಕಾರಕ್ಕೆ ನ್ಯಾಯಾಂಗ ಇಲಾಖೆ ಶಿಫಾರಸ್ಸು ಮಾಡಿ ನ್ಯಾಯಾಂಗ ಇಲಾಖೆ ಆಗ್ರಹಿಸಿದೆ.
ಉಡುಪಿ-ಚಿಕ್ಕಮಗಳೂರು ಸಂಸದೆ, ಕೇಂದ್ರ ಸರ್ಕಾರದ ಸಚಿವೆ ಶೋಭಾ ಕರಂದ್ಲಾಜೆ, ಮಟ್ಟಾರು ರತ್ನಾಕರ್ ಹೆಗ್ಡೆ, ಮಾಜಿ ಅಧ್ಯಕ್ಷರು ವಕೀಲರ ಸಂಘ, ಮಾಜಿ ಶಾಸಕರಾದ ಕೆ ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಹಾಗೂ ಹಾಲಿ ಶಾಸಕರಾದ ಯಶ್‌ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ ಮುಂತಾದವರು ಬ್ರಹ್ಮಾವರದಲ್ಲಿ ನ್ಯಾಯಾಲಯಕ್ಕೆ ಆಗ್ರಹಿಸಿದ್ದರು.
ಬ್ರಹ್ಮಾವರ ಅಭಿವೃದ್ಧಿ ಹೊಂದುವ ತಾಲೂಕು ಕೇಂದ್ರವಾಗಿ ನ್ಯಾಯ ದೇಗುಲ ಆರಂಭಗೊಂಡಿರುವುದು ಬ್ರಹ್ಮಾವರಕ್ಕೆ ಮೆರಗು ತಂದಿದೆ. ಸ್ಥಳೀಯ ಕಕ್ಷಿಗಾರರಿಗೆ ಹಾಗೂ ಸಾರ್ವಜನಿಕರಿಗೆ ಖುಷಿ ತಂದಿದೆ ಎಂದು ಸ್ಥಳೀಯ ನ್ಯಾಯವಾದಿಗಳು ಅಭಿಪ್ರಾಯಪಟ್ಟಿದ್ದಾರೆ.
ಜುಲೈ 27ರಂದು ಬ್ರಹ್ಮಾವರದ ನೂತನ ನ್ಯಾಯಲಯ ಕಟ್ಟಡದಲ್ಲಿ ಪೂರ್ವ ಭಾವಿಯಾಗಿ ವಾಸ್ತು ಹೋಮ ಹಾಗೂ ಇತರ ಪೂಜೆ ಪುರಸ್ಕಾರಗಳು ಜನತೆಯ ಪರವಾಗಿ ಹೋಮ ಹವನಗಳು ಜರಗಿತು. ನೂತನ ನ್ಯಾಯ ದೇಗುಲದ ಪಕ್ಕದಲ್ಲಿರುವ ನಾಗ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದು ಶಿರಿಯಾರ ಕಲ್ಮರ್ಗಿ ಪ್ರಭಾಕರ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.