ಮಾರ್ಚ್ 12ರಿಂದ 19ರ ವರೆಗೆ ಶ್ರೀಕ್ಷೇತ್ರ ಪೆರ್ಡೂರು ಶ್ರೀ ಅನಂತಪದ್ಮನಾಭ ವಾರ್ಷಿಕ ಜಾತ್ರಾ ಮಹೋತ್ಸವ

ಪೆರ್ಡೂರು: ಶ್ರೀಕ್ಷೇತ್ರ ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಮಾರ್ಚ್ 12ರಿಂದ 19ರ ವರೆಗೆ ದೇವರ ಸನ್ನಿಧಿಯಲ್ಲಿ ನಡೆಯಲಿದೆ.

ಶ್ರೀಕ್ಷೇತ್ರದ ತಂತ್ರಿಗಳಾದ ಕೊರಂಗ್ರಪಾಡಿ ಕೆ.ಜಿ. ರಾಘವೇಂದ್ರ ತಂತ್ರಿಗಳ ನೇತೃತ್ವದಲ್ಲಿ ಇಂದಿನಿಂದ ಆರಂಭಗೊಂಡು ಮುಂದಿನ ಏಳು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರಗಲಿವೆ.

ಮಾ. 13: ಬೆಳಿಗ್ಗೆ ಧ್ವಜಾರೋಹಣ, ಅಗ್ನಿಜನನ, ಪ್ರಧಾನಹೋಮ, ಕಲಶಾಭಿಷೇಕ ಹಾಗೂ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಜರಗಲಿದೆ. ರಾತ್ರಿ ದೀವಟಿಗೆ ಸೇವೆ, ಉತ್ಸವ ಬಲಿ, ಪನ್ನಗೋತ್ಸವ, ಶೇಷವಾಹನ, ಓಲಗಮಂಟಪದಲ್ಲಿ ಪೂಜೆ, ಅಷ್ಟಾವಧಾನ ಸೇವೆಗಳು, ಮಹಾಪೂಜೆ, ನಿತ್ಯಬಲಿ, ಸವಾರಿ ಬಲಿ, ಕಟ್ಟೆಪೂಜೆ, ಆರಾಧನಾ ಬಲಿ ನೆರವೇರಲಿದೆ.

ಮಾ.14: ಮಧ್ಯಾಹ್ನ ಪ್ರಧಾನಹೋಮ, ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದ್ದು, ರಾತ್ರಿ ದೀವಟಿಗೆ ಸೇವೆ, ಉತ್ಸವ ಬಲಿ, ಗರುಡವಾಹನ, ತೆಪ್ಪೋತ್ಸವ, ಓಲಗಮಂಟಪದಲ್ಲಿ ಪೂಜೆ, ಅಷ್ಟಾವಧಾನ ಸೇವೆಗಳು, ಮಹಾಪೂಜೆ, ನಿತ್ಯಬಲಿ, ಸವಾರಿ ಬಲಿ, ಕಟ್ಟೆಪೂಜೆ, ಕಂಚಿಲ ಸೇವೆ, ದೊಡ್ಡರಂಗಪೂಜೆ, ರಂಗಪೂಜೆ ಬಲಿ, ಕೆರೆದೀಪ, ಚಂದ್ರಮಂಡಲ ರಥ, ಉಷಃಕಾಲ ಪೂಜೆ, ಕಂಚಿಲ ಪ್ರಸಾದ ವಿತರಣೆ ನಡೆಯಲಿದೆ.

ಮಾ. 15: ಸೋಮವಾರದಂದು ಬೆಳಿಗ್ಗೆ ಪ್ರಧಾನಹೋಮ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಹಾಗೂ ರಾತ್ರಿ ದೀವಟಿಗೆ ಸೇವೆ, ಉತ್ಸವ ಬಲಿ, ವಸಂತೋತ್ಸವ, ಬೆಳ್ಳಿಪಾಲಕಿ, ಚಂದ್ರಮಂಡಲ ರಥ, ಇಡಿಗಾಯಿ, ಓಲಗಮಂಟಪದಲ್ಲಿ ಪೂಜೆ, ಅಷ್ಟಾವಧಾನ ಸೇವೆಗಳು, ಮಹಾಪೂಜೆ, ನಿತ್ಯಬಲಿ, ಸವಾರಿ ಬಲಿ, ಕಟ್ಟೆಪೂಜೆ, ಭುಜಂಗ ಬಲಿ ನೆರವೇರಲಿದೆ.

ಮಾ.16: ಬೆಳಿಗ್ಗೆ ಪ್ರಧಾನಹೋಮ, ಕಲಶಾಭಿಷೇಕ, ರಥಹೋಮ, ರಥಸಂಪ್ರೋಕ್ಷಣೆ, ಕೊಡಿಪೂಜೆ, ಮಹಾಪೂಜೆ, ಬೆಳಿಗ್ಗೆ 11.30ಕ್ಕೆ ರಥಾರೋಹಣ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಅಂದು ಸಂಜೆ 6ಗಂಟೆಗೆ ವೈಭವದ ಶ್ರೀಮನ್ಮಹಾರಥೋತ್ಸವ ಜರಗಲಿದೆ. ರಾತ್ರಿ ದೀವಟಿಗೆ ಸೇವೆ, ನರ್ತನ, ವಾದ್ಯ ಸೇವಾದಿಗಳು, ಹಚ್ಚಡ ಸೇವೆ, ರಥಾರೋಹಣ, ಪಲ್ಲಕ್ಕಿ ಉತ್ಸವ, ತೆಪ್ಪೋತ್ಸವ, ಓಲಗಮಂಟಪದಲ್ಲಿ ಪೂಜೆ, ಅಷ್ಟಾವಧಾನ ಸೇವೆಗಳು, ಮಹಾಪೂಜೆ, ಶ್ರೀಭೂತಬಲಿ, ಕವಾಟಬಂಧನ, ಶಯನೋಲಗ ನಡೆಯಲಿದೆ.

ಮಾ. 17: ಬೆಳಿಗ್ಗೆ ಮಖಾದಾನ, ಕವಾಟೋಧ್ಘಾಟನೆ, ಅಷ್ಟಾವಧಾನ ಸೇವೆಗಳು, ಅಂಕುರಪ್ರಸಾದ ವಿತರಣೆ, ಭಕ್ತರ ತುಲಾಭಾರಾದಿ ಸೇವೆಗಳು, ಕೊಡಿನೀರು, ಪ್ರಧಾನಹೋಮ, ಕಲಶಾಭಿಷೇಕ ಹಾಗೂ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ದೀವಟಿಗೆ ಸೇವೆ, ಓಲಗಮಂಟಪದಲ್ಲಿ ಪೂಜೆ, ಓಕುಳಿ, ತೀರ್ಥಯಾತ್ರಾ ಬಲಿ, ಅವಭೃತ, ಆರಾಟೋತ್ಸವ, ಸೂಟೆದಾರೆ, ರಾಜಬೀದಿ ಪಲ್ಲಕ್ಕಿ ಉತ್ಸವ, ಪೂರ್ಣಾಹುತಿ, ಮಂತ್ರಾಕ್ಷತೆ, ಧ್ವಜಾವರೋಹಣ, ಮಹಾಪೂಜೆ, ನಿತ್ಯಬಲಿ, ದೊಡ್ಡರಂಗಪೂಜೆ, ರಂಗಪೂಜೆ ಬಲಿ, ಚಂದ್ರಮಂಡಲ ರಥ ಜರಗಲಿದೆ.

ಮಾ. 18: ಬೆಳಿಗ್ಗೆ ಪುಣ್ಯಾಹವಾಚನ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಹಾಗೂ ರಾತ್ರಿ ದೀವಟಿಗೆ ಸೇವೆ, ಉತ್ಸವ ಬಲಿ, ಪಲ್ಲಕ್ಕಿ ಉತ್ಸವ, ಚಂದ್ರಮಂಡಲ ರಥ, ಓಲಗಮಂಟಪದಲ್ಲಿ ಪೂಜೆ, ಅಷ್ಟಾವಧಾನ ಸೇವೆಗಳು, ಓಕುಳಿಯಾಟ, ಮಹಾಪೂಜೆ, ನಿತ್ಯಬಲಿ ಜರಗಲಿದೆ.

ಮಾ. 19: ಬೆಳಿಗ್ಗೆ ಮಹಾಸಂಪ್ರೋಕ್ಷಣೆ, ಗಣಹೋಮ, ಬ್ರಹ್ಮಕುಂಭಾಭಿಷೇಕ ನೆರವೇರಲಿದೆ. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಮಹಾಮಂತ್ರಾಕ್ಷತೆ ಹಾಗೂ ರಾತ್ರಿ ಮಹಾಪೂಜೆ, ನಿತ್ಯಬಲಿ, ಪರಿವಾರ ದೈವಗಳ ಪೂಜೆ, ಬಲಿ ಸೇವೆ ನೆರವೇರಲಿದೆ.