ಪೆರ್ಡೂರು: ಉಡುಪಿ- ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟಗಳಲ್ಲಿ ಮಿಂಚಿದ್ದ ವೇಗಿ, ಉದಯೋನ್ಮುಖ ಕ್ರಿಕೆಟಿಗ ರಕ್ಷಿತ್ ಶೆಟ್ಟಿ ಪೆರ್ಡೂರು(29 ವರ್ಷ) ಬ್ರೈನ್ ಟ್ಯೂಮರ್ ನಿಂದ ಇಂದು ನಿಧನರಾದರು.
ಪೆರ್ಡೂರು ಬುಕ್ಕಿಗುಡ್ಡೆ ನಿವಾಸಿಯಾಗಿರುವ ರಕ್ಷಿತ್ ಶೆಟ್ಟಿ ಇವರು ಗೆಳೆಯರ ಬಳಗ ಪೆರ್ಡೂರು ತಂಡದ ಮೂಲಕ ಕ್ರಿಕೆಟ್ ಜೀವನವನ್ನು ಪ್ರಾರಂಭಿಸಿದರು. ನಂತರ ಯಂಗ್ ಸ್ಟಾರ್ ಪೆರ್ಡೂರು, ದುರ್ಗಾ ಆತ್ರಾಡಿ ತಂಡಗಳ ಪರವಾಗಿ ಜಿಲ್ಲಾಮಟ್ಟದ ಪಂದ್ಯಗಳನ್ನಾಡಿದ್ದರು. ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ ರಕ್ಷಿತ್ ಶೆಟ್ಟಿ ಎಸ್.ಝಡ್.ಸಿ.ಸಿ ಮತ್ತು ಎಮ್.ಬಿ.ಸಿ.ಸಿ ತಂಡಗಳ ಪರವಾಗಿ ತನ್ನ ಆಕರ್ಷಕ ಶೈಲಿಯ ಬೌಲಿಂಗ್ ಶೈಲಿಯ ಮೂಲಕ ಯಶಸ್ಸು ಸಾಧಿಸಿದ್ದರು. ತನ್ನ ಸರಳ ಸಜ್ಜನಿಕೆಯಿಂದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು.