ಪೆರ್ಡೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪೆರ್ಡೂರು ಇದರ ಅಧ್ಯಕ್ಷರಾಗಿ ಸಂತೋಷ್ ಕುಲಾಲ ಪಕ್ಕಾಲ್ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಹರೀಶ ಕುಲಾಲ ಹಂದಿಬೆಟ್ಟು, ನಿರ್ದೇಶಕರಾಗಿ ಯು. ಸುಂದರ ಕುಲಾಲ ಅಲೆವೂರು, ಶೇಖರ ಕುಕ್ಕಿಕಟ್ಟೆ, ಶಂಕರ್ ಪೆರಂಪಳ್ಳಿ, ಜಗನ್ನಾಥ ಕುಲಾಲ ಶಿವಪುರ, ಯೋಗೀಶ್ ಬೋಳುಗುಡ್ಡೆ, ರವೀಂದ್ರ ಕುಲಾಲ ಚೇರ್ಕಾಡಿ, ಗಣೇಶ ಕುಲಾಲ ಪಕ್ಕಾಲು,ಸುರೇಶ ಕುಲಾಲ ಗುಂಡ್ಯಡ್ಕ, ಮಂಜುನಾಥ ಕುಲಾಲ ಕುಬ್ರಿ ಮುಳ್ಳುಗುಡ್ಡೆ, ಪ್ರಪುಲ್ಲ ಎಸ್. ಕುಲಾಲ ಬೈರಂಪಳ್ಳಿ, ಶ್ಯಾಮಲ ಕೆ.ಕುಲಾಲ ಪೆರ್ಡೂರು ಆಯ್ಕೆಯಾಗಿದ್ದಾರೆ.

ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಕೆ.ಆರ್. ರೋಹಿತ್ ಚುನಾವಣ ಅಧಿಕಾರಿಯಾಗಿ ಕಾರ್ಯನಿರ್ವಹಿ ಸಿದರು. ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಸುಧಾಕರ ಕುಲಾಲ್ ಪಟ್ಲ ಸಹಕರಿಸಿದರು.

















