ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ ನಿಯಮಿತ: ವಾರ್ಷಿಕ ಮಹಾಸಭೆ

ಪೆರ್ಡೂರು: ಪೆರ್ಡೂರು ಸಮಾಜ ಬಾಂಧವರ ನಿರಂತರ ಸಹಕಾರದಿಂದ ಸಂಘ ಅಭಿವೃದ್ದಿ ಹೊಂದುವುದರ ಜತೆಗೆ ಲಾಭಾಂಶವನ್ನು ಶಿಕ್ಷಣ ಆರೋಗ್ಯ ಮತ್ತು ವಸತಿ ವಿಚಾರದಲ್ಲಿ ಸಮಾಜ ಬಾಂಧವರಿಗೆ ನೀಡಲಾಗುತ್ತಿದೆ. ಅಲ್ಲದೆ ಸಂಘದ ಎಲ್ಲಾ ನಿರ್ದೇಶಕರು ಯಾವುದೇ ಗೌರವ ಧನ ಹಾಗೂ ಡಿವಿಡೆಂಟ್ ನ್ನು ಪಡೆಯದೆ ಸಂಘದ ಬೆಳವಣಿಗೆಗೆ ಸಹಕಾರಿಯಾಗಿ ಸದಸ್ಯರಿಗೆ ಶೇ. 8 ಡಿವಿಡೆಂಟ್ ಘೋಷಿಸಲಾಗಿದೆ ಎಂದು ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷ ಶಾಂತಾರಾಮ ಸೂಡ ಕೆ. ಹೇಳಿದರು.

ಅವರು ಸೆ.24ರಂದು ಪೆರ್ಡೂರು ಬಂಟರ ಸಮುದಾಯ ಭವನದ ಸಮಚ್ಚಯದಲ್ಲಿ ನಡೆದ ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ ನಿಯಮಿತ ಇದರ 2022 23ನೇ ಸಾಲಿನ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ ಇದರ ಉಪಾಧ್ಯಕ್ಷ ಸುಧಾಕರ ಶೆಟ್ಟಿ, ನಿರ್ದೇಶಕರಾದ ಶಿವರಾಮ್ ಶೆಟ್ಟಿ, ಮಹೇಶ್ ಕುಮಾರ್ ಶೆಟ್ಟಿ, ಪ್ರಮೋದ್ ರೈ ಪಳಜೆ, ರಾಜ್ ಕುಮಾರ್ ಶೆಟ್ಟಿ, ಭಾರತಿ ಎಸ್. ಶೆಟ್ಟಿ, ಸರಳಾ ಎಸ್. ಹೆಗ್ಡೆ, ಪ್ರಕಾಶ್ ಹೆಗ್ಡೆ, ದಿನೇಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧೀರಜ್ ಶೆಟ್ಟಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸಂಘದ ನಿರ್ದೇಶಕ ಸತೀಶ್ ಶೆಟ್ಟಿ ಸ್ವಾಗತಿಸಿ, ಶ್ರೀಧರ ಕೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.