ಪೆರ್ಡೂರಿನಲ್ಲಿ ಸುಮಾರು 80 ವರ್ಷಗಳಿಂದ ಸಿಹಿ ತಯಾರಿಸುತ್ತಿರುವ ಜೋಗರಾಯ ಶೇಟ್, ರವಿ ಶೇಟ್, ಶಂಕರ್ ಶೇಟ್ ಇವರ ಶ್ರೀ ಅನಂತಪದ್ಮನಾಭ ಸ್ವೀಟ್ ಸ್ಟಾಲ್ ನ ಸಿಹಿ ತಿಂಡಿಗಳು ದೇಶಿ ಸ್ವಾದದಿಂದ ಜನರ ಬಾಯನ್ನು ಸೆಳೆಯುತ್ತಿವೆ. ಈ ಮೂವ್ವರೂ ತಮ್ಮ ತಂದೆಯ ಕಾಲದಿಂದಲೂ ಸಿಹಿತಿಂಡಿಯ ಉದ್ಯೋಗವನ್ನು ಅವಲಂಬಿಸಿ ಜನಗಳಿಗೆ ಸಿಹಿಯನ್ನು ಹಂಚುತ್ತಿದ್ದಾರೆ. ಸಕ್ಕರೆ ಮಿಠಾಯಿ, ಬೆಂಡು, ಜಿಲೇಬಿ, ಅತ್ರಾಸ, ಚಕ್ಕುಲಿ ಮುಂದಾದ ಸಿಹಿ ತಿಂಡಿಯನ್ನು ತಯಾರಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೇಶಿ ಸ್ವಾದವಿರುವ ಇವರ ಸಿಹಿತಿಂಡಿಗಳು ಸ್ವಾದಿಷ್ಟ ಮತ್ತು ಪರಂಪರೆಯ ರುಚಿಯುಳ್ಳವು.
ತಮ್ಮ ಮನೆಯಲ್ಲಿ ಶುದ್ಧವಾದ ತಿಂಡಿಗಳನ್ನು ತಯಾರಿಸಿ ಊರ ಜನರಿಗೆ ರುಚಿ ಹತ್ತಿಸುತ್ತಿದ್ದಾರೆ. ಸಿಹಿತಿಂಡಿಯಿಂದಲೇ ಬದುಕನ್ನು ಕಂಡುಕೊಂಡ ಈ ಕುಟುಂಬವೂ ಸಿಹಿಯಾಗಿ ಬಾಳುತ್ತ, ಸಾರ್ವಜನಿಕರಿಗೆ ಕ್ಲಪ್ತ ಸಮಯದಲ್ಲಿ ಸಿಹಿ ತಿಂಡಿಗಳನ್ನು ಪೂರೈಸುತ್ತಿದೆ.ಇದೀಗ ಊರ ಜಾತ್ರೆಗಳ ಸಂಭ್ರಮ ನಿಮಗೆಲ್ಲಾದರೂ ಶ್ರೀ ಅನಂತಪದ್ಮನಾಭ ಸ್ವೀಟ್ ಸ್ಟಾಲ್ ಬುಕ್ಕಿ ಗುಡ್ಡೆ ಪೆರ್ಡೂರು ಎನ್ನುವ ಸ್ವೀಟ್ ಸ್ಟಾಲಿನ ಬೋರ್ಡ್ ಕಂಡರೆ ಒಮ್ಮೆ ಈ ಸ್ಟಾಲಿನ ಸಿಹಿತಿಂಡಿಗಳ ರುಚಿಯನ್ನೊಮ್ಮೆ ನೋಡಿ. ಸಿಹಿ ತಿಂಡಿಗಳಿಗಾಗಿ 9902198831 ಸಂಪರ್ಕಿಸಬಹುದು.