ಪೆರ್ಡೂರು ಶಾಲಾ ವಿದ್ಯಾರ್ಥಿಗಳಿಗೆ ಶೂ ವಿತರಣೆ

ಹೆಬ್ರಿ: ಪೆರ್ಡೂರು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಅನಂತಸ್ಪರ್ಶ ಲೀಜನ್ ವತಿಯಿಂದ ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘು, ಮಂಗಳೂರು ಎಸ್‌ಕೆಜಿಐ ಇಂಡಸ್ಟ್ರಿಯಲ್ ಕೋ–ಆಪರೇಟಿವ್ ಸೊಸೈಟಿ ಸಹಭಾಗಿತ್ವದಲ್ಲಿ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಶೂ ವಿತರಣೆ ನಡೆಯಿತು.

ಪೆರ್ಡೂರು ಅನಂತಸ್ಪರ್ಶ ಲೀಜನ್ ಅಧ್ಯಕ್ಷ ಪುರುಷೋತ್ತಮ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಸೀನಿಯರ್ ಚೇಂಬರ್ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಪಿ.ಎ್.ಹುಸೇನ್ ಹಾಯ್ಕಾಡಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಮೋದ್ ರೈ, ಎಸ್‌ಕೆಜಿಐ ಬ್ಯಾಂಕ್ ಅಧ್ಯಕ್ಷ ಉಪೇಂದ್ರ ಆಚಾರ್ಯ, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಅಧ್ಯಕ್ಷ ಸಂತೋಷ್ ಕುಲಾಲ್, ಉದ್ಯಮಿ ರಾಮ ಕುಲಾಲ್, ಎಸ್‌ಡಿಎಂಸಿ ಅಧ್ಯಕ್ಷ ನರಸಿಂಹ ದೇವಾಡಿಗ, ಅನಂತಸ್ಪರ್ಶ ಲೀಜನ್ ಮಾಜಿ ಅಧ್ಯಕ್ಷ ಬಿ.ಚಂದ್ರಶೇಖರ ಶೆಟ್ಟಿ, ಮಾಜಿ ಕಾರ್ಯದರ್ಶಿ ಆನಂದ ಗೌಡ, ಕಾರ್ಯದರ್ಶಿ ಹರೀಶ್ ಶೆಟ್ಟಿ, ಕೋಶಾಧಿಕಾರಿ ರಾಘವೇಂದ್ರ, ಯುವಕ ಸಂಘದ ಮಾಜಿ ಅಧ್ಯಕ್ಷ ಸಂದೀಪ್ ಶೆಟ್ಟಿ, ಮುಖ್ಯಶಿಕ್ಷಕ ಸತೀಶ ಶೆಟ್ಟಿ, ಅಧ್ಯಾಪಕ ಬಳಗ, ಪೋಷಕ ವೃಂದ ಉಪಸ್ಥಿತರಿದ್ದರು.